ಮೆಕ್ಸಿಕೊ : ( Train Accident) ದಕ್ಷಿಣ ಮೆಕ್ಸಿಕನ್ ರಾಜ್ಯವಾದ ಓಕ್ಷಾಕದಲ್ಲಿ ಭಾನುವಾರ ಅಂತರ-ಸಾಗರ ರೈಲು ಹಳಿತಪ್ಪಿದ್ದು, ಈ ಅಪಘಾತದಲ್ಲಿ 13 ಜನರು ಸಾವನ್ನಪ್ಪಿದ್ದಾರೆ. 100 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಪ್ರಾಯಾಣಿಕರನ್ನು ಹೊಸತ್ತು ಸಾಗುತ್ತಿದ್ದ ರೈಲು ಹಳಿತಪ್ಪಿದ್ದು, ಇದು ವರ್ಷದ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿದೆ. ಒಂಬತ್ತು ಸಿಬ್ಬಂದಿ ಮತ್ತು 241 ಪ್ರಯಾಣಿಕರು ಸೇರಿದಂತೆ ಸುಮಾರು 250 ಜನರು ಹಳಿಯಲ್ಲಿದ್ದರೆಂದು ಮೆಕ್ಸಿಕನ್ ನೌಕಾಪಡೆ ತಿಳಿಸಿದೆ.
ರೈಲು ಅಪಘಾತದಲ್ಲಿ 13 ಜನರು ಸಾವನ್ನಪ್ಪಿದ್ದಾರೆ, 193 ಜನರು ಬದುಕುಳಿದಿದ್ದಾರೆ. ತೊಂಬತ್ತೆಂಟು ಜನರು ಗಾಯಗೊಂಡಿದ್ದು, 36 ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನೌಕಾಪಡೆ ತಿಳಿಸಿದೆ.
ಹಳಿ ತಪ್ಪಲು ಕಾರಣ ತಿಳಿದುಬಂದಿಲ್ಲ. ಅಪಘಾತದ ಕಾರಣವನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಹದಿಮೂರು ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ ಐದು ಜನರ ಸ್ಥಿತಿ ಗಂಭೀರವಾಗಿದೆ. ಮೃತರ ಕುಟುಂಬಗಳಿಗೆ ಸಹಾಯ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷೆ ಕೌಡಿಯಾ ಶೀನ್‌ಬಾಮ್ ಎಕ್ಸ್-ಪೋಸ್ಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.