ಉಭಯ ದೇಶಗಳ ಮಾತುಕತೆ ವಿಫಲದ ಬಳಿಕ ಮಾತನಾಡಿರುವ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಮಧ್ಯರಾತ್ರಿಯಿಂದಲೇ ಸುಮಾರು 28 ಶತಕೋಟಿ ಡಾಲರ್ ಮೌಲ್ಯದ ಕೆನಡಾದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಲು ಅಮೆರಿಕ ಸಿದ್ಧತೆ ನಡೆಸುತ್ತಿದೆ. ನಮ್ಮ ಕಾರ್ಮಿಕರು ಮತ್ತು ಉದ್ಯಮಗಳನ್ನು ರಕ್ಷಿಸುವ ಸಲುವಾಗಿ ಕೆನಡಾ ಕೂಡ ಅಮೆರಿಕದ ಸರಕುಗಳ ಮೇಲೆ ಪ್ರತೀಕಾರದ ಸುಂಕವನ್ನು ವಿಧಿಸಲಿದೆ ಎಂದು ಹೇಳಿದ್ದಾರೆ.