ಈ ವಿಷಯ ವಿಜ್ಞಾನಿಗಳ ಲೋಕಕ್ಕೆ ಒಂದು ವಿಸ್ಮಯ ಎನ್ನುವಂತೆ ಮಾಡಿದೆ. ಹೌದು, ಪರಿಸರ ಪ್ರೇಮಿಗಳು ಹೀಗೂ ಉಂಟೇ ಎಂದು ತಮ್ಮಲ್ಲೇ ತಾವು ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಅಸಲಿಗೆ, ಇಷ್ಟಕ್ಕೆಲ್ಲ ಕಾರಣ, ಸಣ್ಣ ಬಾಟಲಿ ಕ್ಯಾಪ್ನಲ್ಲಿ ಅಡಗಿದ್ದ ವಿವಿಧ ಜೀವಿಗಳು. ಕಡಲ ತೀರಕ್ಕೆ ತೇಲಿಬಂದ ಈ ಪುಟ್ಟ ಪ್ಲಾಸ್ಟಿಕ್ ಮುಚ್ಚಳವು ಬರೋಬ್ಬರಿ 307 ಜಲಚರಗಳಿಗೆ ಆಶ್ರಯ ನೀಡಿ, ಒಂದು ಕಿರಿದಾದ ಅಂತಾರಾಷ್ಟ್ರೀಯ ಜಲಸಮೂಹವನ್ನೇ ಸೃಷ್ಟಿಸಿದೆ.