ಮೂರು ವಿವಾಹೇತರ ಸಂಬಂಧ; ಎನ್ವಿಡಿಯಾ ಸಿಇಒ ಹುದ್ದೆಗೆ ಜೆನ್ಸನ್​ ಹುವಾಂಗ್ ರಾಜೀನಾಮೆ | Jensen Huang

ಮೂರು ವಿವಾಹೇತರ ಸಂಬಂಧಗಳು ಬಹಿರಂಗವಾದ ಬಳಿಕ ಜಾಗತಿಕ ಟೆಕ್ ಮತ್ತು ಕೃತಕ ಬುದ್ದಿಮತ್ತೆ (AI) ಲೋಕದ ದಿಗ್ಗಜ ಕಂಪನಿ 'ಎನ್ವಿಡಿಯಾ' (Nvidia) ಸಿಇಒ ಜೆನ್ಸನ್ ಹುವಾಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಶುಕ್ರವಾರ(ನ. 13) ವರದಿಯಾಗಿದೆ.
ಮೂರು ವಿವಾಹೇತರ ಸಂಬಂಧ; ಎನ್ವಿಡಿಯಾ ಸಿಇಒ ಹುದ್ದೆಗೆ ಜೆನ್ಸನ್​ ಹುವಾಂಗ್ ರಾಜೀನಾಮೆ | Jensen Huang
Published on: 

ವಾಷಿಂಗ್ಟನ್ ಡಿಸಿ: ಮೂರು ವಿವಾಹೇತರ ಸಂಬಂಧಗಳು ಬಹಿರಂಗವಾದ ಬಳಿಕ ಜಾಗತಿಕ ಟೆಕ್ ಮತ್ತು ಕೃತಕ ಬುದ್ದಿಮತ್ತೆ (AI) ಲೋಕದ ದಿಗ್ಗಜ ಕಂಪನಿ 'ಎನ್ವಿಡಿಯಾ' (Nvidia) ಸಿಇಒ ಜೆನ್ಸನ್ ಹುವಾಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಶುಕ್ರವಾರ(ನ. 13) ವರದಿಯಾಗಿದೆ.

ಗುರುವಾರ(ನ. 12) ಎನ್​ವಿಡಿಯಾ ಜೆನ್ಸನ್ ಹುವಾಂಗ್ ಅವರ ರಾಜೀನಾಮೆಯನ್ನು ಘೋಷಿಸಿದ್ದು, ಇದು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿದೆ. 2013ರಿಂದ ಎನ್ವಿಡಿಯಾದ ಮುಖ್ಯ ಹಣಕಾಸು ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿರುವ ಕೊಲೆಟ್ ಕ್ರೆಸ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಜೆನ್ಸನ್ ಹುವಾಂಗ್ ಮೂರು ವಿವಾಹೇತರ ಸಂಬಂಧಗಳನ್ನು ಹೊಂದಿದ್ದರು, ಅದರಲ್ಲಿ ಒಂದು ಶಂಕಿತ ಚೀನೀ ಗೂಢಚಾರರೊಂದಿಗಿನ ಸಂಬಂಧವೂ ಸೇರಿದೆ. ಆದರೆ ಇದನ್ನು ಚೀನಾ ನಿರಾಕರಿಸಿದೆ. ಈ ಬೆಳವಣಿಗೆಯು ಚಿಪ್ ತಯಾರಕ ಸಂಸ್ಥೆಯಾದ ಎನ್‌ವಿಡಿಯಾಗೆ ಬಿಕ್ಕಟ್ಟನ್ನು ಉಂಟುಮಾಡಿದ್ದು, ಅವರು ಆರ್ಥಿಕವಾಗಿ ಬೆಂಬಲಿಸಿದ ಎಐ (AI) ಉದ್ಯಮದಾದ್ಯಂತ ಆಘಾತವನ್ನು ಮೂಡಿಸಿದೆ.

ಚೀನೀ ಸ್ಪೈ ಹಾಗೂ ಕಂಪನಿ ಉಪಾಧ್ಯಕ್ಷೆಯೊಂದಿಗೆ ಸಂಬಂಧ?

ಚೀನಾದ ಕಂಪನಿಗಳಿಗೆ ಎನ್ವಿಡಿಯಾ ಚಿಪ್‌ಗಳ ಸಾಗಣೆಯನ್ನು ಸುಗಮಗೊಳಿಸುವಲ್ಲಿ ಭಾಗಿಯಾಗಿದ್ದಾರೆ ಎಂದು ಯುಎಸ್ ಗುಪ್ತಚರ ಸಂಸ್ಥೆ ಶಂಕಿಸಿರುವ ಆಲಿಸ್ ಹುವಾಂಗ್ ಎಂಬುವವರೊಂದಿಗೆ ಜೆನ್ಸನ್ ಸಂಬಂಧ ಹೊಂದಿದ್ದರು ಎಂಬ ವಿಚಾರ ಮೊದಲು ಹೊರಬಿದ್ದಿತ್ತು. ಇದರ ಬೆನ್ನಲ್ಲೇ, ಎನ್ವಿಡಿಯಾದ ಆರೋಗ್ಯ ರಕ್ಷಣಾ ವಿಭಾಗದ ಉಪಾಧ್ಯಕ್ಷೆ ಕಿಂಬರ್ಲಿ ಪೊವೆಲ್ ಅವರೊಂದಿಗೂ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದರು ಎಂದು 'ನ್ಯೂಯಾರ್ಕ್ ಟೈಮ್ಸ್' (NYT) ವರದಿ ಮಾಡಿದೆ.

Also Read
ಯುಎಇನಲ್ಲಿ ಭೀಕರ ರಸ್ತೆ ಅಪಘಾತ; ಭಾರತೀಯ ಪ್ರಜೆಗಳು ಸೇರಿ 14 ಮಂದಿ ಸಾ*: 30ಕ್ಕೂ ಹೆಚ್ಚು ಜನರಿಗೆ ಗಾಯ | UAE
ಮೂರು ವಿವಾಹೇತರ ಸಂಬಂಧ; ಎನ್ವಿಡಿಯಾ ಸಿಇಒ ಹುದ್ದೆಗೆ ಜೆನ್ಸನ್​ ಹುವಾಂಗ್ ರಾಜೀನಾಮೆ | Jensen Huang

ಈ ಬಗ್ಗೆ ಪ್ರತಿಕ್ರಿಯೆ ಕೇಳಲು ನ್ಯೂಯಾರ್ಕ್ ಟೈಮ್ಸ್ ವರದಿಗಾರರು ಫೋನ್ ಮಾಡಿದಾಗ, "ನೀವು ನನ್ನೊಂದಿಗೆ ನೇರವಾಗಿ ಮಾತನಾಡಬಾರದು" ಎಂದು ಹೇಳಿ ಹುವಾಂಗ್ ಕರೆ ಕಟ್ ಮಾಡಿದ್ದಾರೆ ಎನ್ನಲಾಗಿದೆ.

ಪತ್ನಿಗೆ ಮೋಸ ಮಾಡಿದ್ದನ್ನು ಒಪ್ಪಿಕೊಂಡ ಸಿಇಒ!

ಈ ವಿವಾದ ಭುಗಿಲೇಳುತ್ತಿದ್ದಂತೆ ಭಾನುವಾರ ಉದ್ಯೋಗಿಗಳಿಗೆ ಪತ್ರ ಬರೆದಿದ್ದ ಜೆನ್ಸನ್ ಹುವಾಂಗ್, ತಮ್ಮ ಪತ್ನಿಗೆ ವಿಶ್ವಾಸದ್ರೋಹ ಬಗೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಮತ್ತು ಇದಕ್ಕೆ ತಾವೇ ಸಂಪೂರ್ಣ ಜವಾಬ್ದಾರರು ಎಂದಿದ್ದಾರೆ. ಆದರೆ ಸಂಬಂಧದ ಕುರಿತು ಹೆಚ್ಚಿನ ವಿವರ ನೀಡಿಲ್ಲ.

ಇನ್ನೂ, ಹುವಾಂಗ್ ಅವರ ರಾಜೀನಾಮೆಯ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಅಮೆರಿಕದ ಶೇರು ಮಾರುಕಟ್ಟೆಯಲ್ಲಿ ಎನ್‌ವಿಡಿಯಾ ಷೇರುಗಳು ಶೇಕಡಾ 13ಕ್ಕೂ ಹೆಚ್ಚು ಕುಸಿದಿದ್ದವು. ಆದರೆ, ಕ್ರೆಸ್ ಅವರನ್ನು ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಿಸಿದ ಬಳಿಕ, ಈ ಷೇರುಗಳು ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿವೆ (ಏಜೆನ್ಸೀಸ್).