Russia | ಇದು ವಿರಾಟ್, ಸಹಾಯ ಬೇಕು; ಕಪ್ಪು ಸಮುದ್ರದಲ್ಲಿ ರಷ್ಯಾದ ಟ್ಯಾಂಕರ್‌ಗಳ ಮೇಲೆ ದಾಳಿ: ಜವಾಬ್ದಾರಿ ಹೊತ್ತುಕೊಂಡ ಯುಕ್ರೇನ್

Russia | ಕಪ್ಪು ಸಮುದ್ರದಲ್ಲಿ ವಿರಾಟ್ ಮತ್ತು ಕೈರೋಸ್ ಎಂಬ ಎರಡು ರಷ್ಯಾದ ಟ್ಯಾಂಕರ್‌ಗಳ ಮೇಲೆ ಉಕ್ರೇನ್ ದಾಳಿ ಮಾಡಿತು.
Russia | ಕಪ್ಪು ಸಮುದ್ರದಲ್ಲಿ ವಿರಾಟ್ ಮತ್ತು ಕೈರೋಸ್ ಎಂಬ ಎರಡು ರಷ್ಯಾದ ಟ್ಯಾಂಕರ್‌ಗಳ ಮೇಲೆ ಉಕ್ರೇನ್ ದಾಳಿ ಮಾಡಿತು.
Published on
ಮಾಸ್ಕೋ: ಕಪ್ಪು ಸಮುದ್ರದಲ್ಲಿ ಮಾನವರಹಿತ ಸಮುದ್ರ ವಾಹನವೊಂದು ರಷ್ಯಾದ(Russia) ತೈಲ ಟ್ಯಾಂಕರ್ ವಿರಾಟ್​ಗೆ ಶನಿವಾರ (ನ.29) ಡಿಕ್ಕಿ ಹೊಡೆದಿದೆ. ಇದೇ ಟ್ಯಾಂಕರ್ ಈ ಹಿಂದೆ ಶುಕ್ರವಾರ ತಡರಾತ್ರಿ ಸ್ಫೋಟಗಳಿಗೆ ಗುರಿಯಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಟ್ಯಾಂಕರ್‌ನ ಸಿಬ್ಬಂದಿ ತಡೆಹಿಡಿಯಲಾದ ಓಪನ್-ಫ್ರೀಕ್ವೆನ್ಸಿ ರೇಡಿಯೋ ಡಿಸ್ಟ್ರೆಸ್ ಕರೆಯಲ್ಲಿ ಡ್ರೋನ್ ದಾಳಿಯನ್ನು ವರದಿ ಮಾಡಿದ್ದಾರೆ. ಅದರೆ, ಅವರು ಮಾನವರಹಿತ ಕಡಲ ಡ್ರೋನ್‌ಗಳನ್ನು ಉಲ್ಲೇಖಿಸಿದ್ದು, ವೀಡಿಯೊದಲ್ಲಿ, ಸಿಬ್ಬಂದಿ ಇದು ವಿರಾಟ್​ ಸಹಾಯ ಬೇಕು ಎಂದು ಹೇಳುವುದನ್ನು ಕೇಳಬಹುದು.
ಈ ದಾಳಿಯ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಟರ್ಕಿಶ್ ಸಾರಿಗೆ ಸಚಿವಾಲಯ, ಕಪ್ಪು ಸಮುದ್ರದ ಕರಾವಳಿಯಿಂದ ಸುಮಾರು 35 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮಾನವರಹಿತ ಸಮುದ್ರ ವಾಹನಗಳಿಂದ ದಾಳಿ ಮಾಡಲಾಗಿದೆ. ಅಲ್ಲದೆ, ಈ ಹಿಂದೆ ಹೇಳಲಾಗಿದ್ದ ವಿರಾಟ್ ಮೇಲೆ ಇಂದು ಮುಂಜಾನೆ ಮತ್ತೆ ಮಾನವರಹಿತ ಸಮುದ್ರ ವಾಹನಗಳಿಂದ ದಾಳಿ ಮಾಡಿವೆ ಎಂದು ತಿಳಿಸಿದೆ.
ಬಾಹ್ಯ ಡಿಕ್ಕಿ ಎಂದರೆ ರಾಕೆಟ್ ಅಥವಾ ಬಹುಶಃ ಡ್ರೋನ್ ಅಥವಾ ಮಾನವರಹಿತ ನೀರೊಳಗಿನ ವಾಹನದಿಂದ ಹೊಡೆದಿದೆ. ಇವು ಮೊದಲು ಮನಸ್ಸಿಗೆ ಬರುವ ವಿಷಯಗಳು ಎಂದು ಸಾರಿಗೆ ಸಚಿವ ಅಬ್ದುಲ್ಕದಿರ್ ಉರಾಲೋಗ್ಲು ಮಾಹಿತಿ ನೀಡಿದ್ದಾರೆ. ವಿರಾಟ್​ಗೆ ಸಣ್ಣಪುಟ್ಟ ಹಾನಿಯಾದರೂ, ಅದು ಸ್ಥಿರ ಸ್ಥಿತಿಯಲ್ಲಿದೆ ಮತ್ತು ಸಿಬ್ಬಂದಿ ಕೂಡ ಉತ್ತಮ ಆರೋಗ್ಯದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ದಾಳಿಯ ಜವಾಬ್ದಾರಿ ಹೊತ್ತುಕೊಂಡ ಯುಕ್ರೇನ್

ರಷ್ಯಾದ ನೌಕಾಪಡೆಯ ಟ್ಯಾಂಕರ್‌ಗಳ ಮೇಲಿನ ದಾಳಿಯ ಹಿಂದೆ ಯುಕ್ರೇನ್ ಕೈವ್ ಕೈವಾಡವಿದೆ ಎಂದು ಎಎಫ್‌ಪಿ ವರದಿ ಮಾಡಿದೆ. ಅಲ್ಲದೆ, ರಷ್ಯಾ-ಯುಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ, ಕೈವ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಅಮೆರಿಕದ ತೀವ್ರ ಒತ್ತಡದಲ್ಲಿರುವ ಸಮಯದಲ್ಲಿ ಈ ದಾಳಿ ಮಾಡಿದೆ.
ನೌಕಾಪಡೆ ಹಡಗುಗಳನ್ನು ಹೊಡೆದುರುಳಿಸುವ ಜಂಟಿ ಕಾರ್ಯಾಚರಣೆಯನ್ನು ಎಸ್‌ಬಿಯು ಮತ್ತು ಯುಕ್ರೇನ್ ನೌಕಾಪಡೆ ನಡೆಸಿತು ಎಂದು ಯುಕ್ರೇನ್‌ನ ಭದ್ರತಾ ಸೇವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಡಿಕ್ಕಿ ಹೊಡೆದ ನಂತರ, ಎರಡೂ ಟ್ಯಾಂಕರ್‌ಗಳು ಗಂಭೀರ ಹಾನಿಯನ್ನು ಅನುಭವಿಸಿವೆ. ಇವುಗಳನ್ನು ಸೇವೆಯಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ವೀಡಿಯೊ (ತುಣುಕುಗಳು) ತೋರಿಸುತ್ತದೆ. ಇದು ರಷ್ಯಾದ ತೈಲ ಸಾಗಣೆಗೆ ಗಮನಾರ್ಹ ಹೊಡೆತ ನೀಡುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.
ಆಧುನೀಕರಿಸಿದ ಸೀ ಬೇಬಿ ನೌಕಾ ಡ್ರೋನ್‌ಗಳು ಹಡಗುಗಳನ್ನು ಯಶಸ್ವಿಯಾಗಿ ಗುರಿಯಾಗಿಸಿಕೊಂಡವು ಎಂದು ಯುಕ್ರೇನ್‌ನ SBU ಭದ್ರತಾ ಸೇವೆಯ ಮೂಲವೊಂದು AFP ಗೆ ತಿಳಿಸಿದೆ. ಸಮುದ್ರ ಡ್ರೋನ್‌ಗಳು ಎರಡು ಹಡಗುಗಳ ಕಡೆಗೆ ಜಾರುತ್ತಿರುವುದನ್ನು ಮತ್ತು ಸ್ಫೋಟಗಳನ್ನು ಉಂಟುಮಾಡುವುದನ್ನು ತೋರಿಸುವ ವೀಡಿಯೊವನ್ನು ಸಹ ಹಂಚಿಕೊಂಡಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net