ಇದೇ ಸರಿಯಾದ ಸಮಯ, ಇರಾನ್ ಮೇಲೆ ಬಾಂಬ್ ಹಾಕಿ ಜಿಹಾದಿಗಳನ್ನು ಮುಗಿಸಿ: ಅಯತೊಲ್ಲಾ ಖಮೇನಿ ಅಂತ್ಯಕ್ರಿಯೆ; ಟ್ರಂಪ್ ಆಪ್ತೆ ಲಾರಾ ಲೂಮರ್ ವಿವಾದಾತ್ಮಕ ಹೇಳಿಕೆ! Laura Loomer on Khamenei Funeral
ಇರಾನ್ ಮೇಲೆ ಬಾಂಬ್ ಹಾಕಿ ಜಿಹಾದಿಗಳನ್ನು ಮುಗಿಸಲು ಇದುವೇ ಸೂಕ್ತ ಸಮಯ: ಲಾರಾ ಲೂಮರ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಇರಾನ್ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅಂತ್ಯಕ್ರಿಯೆ ವೇಳೆ ವೈಮಾನಿಕ ದಾಳಿ ನಡೆಸಿ
ಇರಾನ್ ಮೇಲೆ ಬಾಂಬ್ ಹಾಕಿ ಜಿಹಾದಿಗಳನ್ನು ಮುಗಿಸಲು ಇದುವೇ ಸೂಕ್ತ ಸಮಯ: ಲಾರಾ ಲೂಮರ್
ಡೊನಾಲ್ಡ್ ಟ್ರಂಪ್ ಆಪ್ತೆ ಲಾರಾ ಲೂಮರ್ ಹೇಳಿಕೆಗೆ ತೀವ್ರ ವಿರೋಧ
ಅಮೆರಿಕ: ಜುಲೈ 4 ರಿಂದ 9 ರ ವರೆಗೆ ಇರಾನ್ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ಅಂತ್ಯಸಂಸ್ಕಾರ ನಡೆಯಲಿದ್ದು, ಈ ಸಂದರ್ಭದಲ್ಲಿ ಇಸ್ರೇಲ್ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿ ಜಿಹಾದಿಗಳನ್ನು ಕೊಲ್ಲಲಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತೆ ಲಾರಾ ಲೂಮರ್ (Laura Loomer on Khamenei Funeral) ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಜುಲೈ 6,7 ಹಾಗೂ 9 ರಂದು ಅತಿ ಹೆಚ್ಚಿನ ಜನ ಈ ಕಾರ್ಯಕ್ರಮಕ್ಕೆ ಭಾಗಿಯಾಗಲಿದ್ದಾರೆ. ಈ ಸಮಯವನ್ನು ಇಸ್ರೇಲ್ನ ಮಿಲಿಟರಿ ಪಡೆ ಇಸ್ರೇಲ್ ಡಿಫೆನ್ಸ್ ಫೋರ್ಸ್ (IDF) ಸಮರ್ಥವಾಗಿ ಬಳಸಿಕೊಳ್ಳಬೇಕೆಂದು ಲಾರಾ ಲೂಮರ್ ಹೇಳಿದ್ದಾರೆ.
ಅಮೆರಿಕದ ಬಲಪಂಥಿಯ ನಾಯಕಿ ಎಂದೇ ಗುರುತಿಸಿಕೊಂಡಿರುವ ಲಾರಾ ಲೂಮರ್, ಅಯತೊಲ್ಲಾ ಖಮೇನಿಯ ಅಂತ್ಯಸಂಸ್ಕಾರದ ಫೋಸ್ಟ್ವೊಂದಕ್ಕೆ, ಅಯತೊಲ್ಲಾ ಖಮೇನಿಗೆ ಅಂತ್ಯಸಂಸ್ಕಾರವೇ? ಇದು ನಮಗೆ ಉತ್ತಮ ಅವಕಾಶ ಎಂದು ಬರೆದು ಬಾಂಬಿನ ಎಮೋಜಿಯನ್ನು ತಮ್ಮ ಬರಹದಲ್ಲಿ ಹಾಕಿದ್ದಾರೆ.
ಅವರ ಈ ಬರಹ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಇನ್ನೊಂದು ಟ್ವಿಟ್ನಲ್ಲಿ, ಜಿಹಾದಿಗಳ ಸಂಹಾರಕ್ಕಾಗಿ ಅಮೆರಿಕ ಮತ್ತು ಇಸ್ರೇಲ್ಗೆ ದೊರೆಯುವ ಅವಕಾಶವನ್ನು ನಾನು ಸಮರ್ಥಿಸುತ್ತೆನೆಂದು ಬರೆದುಕೊಂಡಿದ್ದಾರೆ.
ಇರಾನ್ ವಾರ್ನಿಂಗ್!
ಕೆಲ ದಿನಗಳ ಹಿಂದೆ ಇರಾನ್, ಜುಲೈನಲ್ಲಿ ನಮ್ಮ ಮಾಜಿ ನಾಯಕನ ಅಂತ್ಯಸಂಸ್ಕಾರ ನಡೆಯಲಿದ್ದು, ಈ ಸಮಯದಲ್ಲಿ ನಮ್ಮ ಮೇಲೆ ದಾಳಿ ಮಾಡುವ ಯೋಚನೆಯನ್ನು ಅಮೆರಿಕ ಮತ್ತು ಇಸ್ರೇಲ್ ತಮ್ಮ ತಲೆಯಿಂದ ತೆಗೆದುಹಾಕಬೇಕೆಂದು ಮಿಲಿಟಿರಿ ಮುಖ್ಯಸ್ಥ ಅಲಿ ಅಬ್ದುಲ್ಲಾಹಿ (Ali Abdollahi) ಎಚ್ಚರಿಕೆ ನೀಡಿದ್ದಾರೆ.
ಲಾರಾ ಲೂಮರ್ ಮುಸಲ್ಮಾನರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು ಇದೇ ಮೊದಲಲ್ಲ. ಈ ಮೊದಲು ಪ್ರಪಂಚದ ಎಲ್ಲಾ ಮುಸ್ಲಿಮರು ಜಿಹಾದಿಗಳು ಎಂಬ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು. ತಮ್ಮ ತೀಕ್ಷ್ಣ ನಿಲುವುಗಳಿಂದಲೇ ಅಮೆರಿಕದಲ್ಲಿ ಗಟ್ಟಿಗಿತ್ತಿ ಎಂದು ಈ ಲಾರಾ ಲೂಮರ್ಳನ್ನು ಕರೆಯುತ್ತಾರೆ, (ಏಜನ್ಸೀಸ್).