ಇದೊಂದು ಭಯೋತ್ಪಾದಕ ಕೃತ್ಯ! ಪಾಕೆಟ್ ಚಾಕು ಅಲ್ಲ, ಕೊಡಲಿಯಿಂದ ದಾಳಿ; UAE ತನಿಖೆಯಲ್ಲಿ ಬಯಲಾದ ಸ್ಫೋಟಕ ಸತ್ಯವೇನು? UAE Investigation

ಇದೊಂದು ಪಕ್ಕಾ ಭಯೋತ್ಪಾದಕ ಕೃತ್ಯ! ಪಾಕೆಟ್ ಚಾಕುವಿನಿಂದ ಅಲ್ಲ, ಬದಲಿಗೆ ಕೊಡಲಿಯಿಂದ ಭೀಕರ ದಾಳಿ ನಡೆಸಿರುವುದು ಯುಎಇ ತನಿಖೆಯಲ್ಲಿ ಬಯಲಾಗಿದೆ. ಈ ಸ್ಫೋಟಕ ಸತ್ಯದ ಸಂಪೂರ್ಣ ವಿವರ ಇಲ್ಲಿದೆ.
UAE investigative agencies make an explosive revelation: the attack was carried out with an axe, not a pocket knife.
ಪಾಕೆಟ್ ಚಾಕುವಲ್ಲ, ಕೊಡಲಿಯಿಂದ ದಾಳಿ ನಡೆಸಲಾಗಿದೆ ಎಂಬ ಯುಎಇ ತನಿಖಾ ಸಂಸ್ಥೆಗಳ ಸ್ಫೋಟಕ ಬಹಿರಂಗ
Published on: 

ಯುಎಇ: ಸೆಪ್ಟೆಂಬರ್​ 30 ರಂದು ದುಬೈನಿಂದ ಇಸ್ರೇಲ್‌ಗೆ ಪ್ರಯಾಣ ಬೆಳಿಸಿದ್ದ ಫ್ಲೈದುಬೈ (flydubai) ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ಘಟನೆ ಇಡೀ ವಿಶ್ವವೇ ಬೆಚ್ಚಿಬೀಳುವಂತೆ ಮಾಡಿದೆ. ವಿಮಾನದ ಕ್ಯಾಪ್ಟನ್​ ಸ್ಮಿತ್​ ಮಚ್ಚಾರ್​ ಮೇಲೆ ಸಹ ಪೈಲಟ್​ ಹಮಾಮ್ ಅಲ್ಹಮ್ಮಮಿ ಮಾರಣಾಂತಿಕ ಹಲ್ಲೆ ನಡೆಸಿ ವಿಮಾನವನ್ನು ತನ್ನ ಹಿಡಿತಕ್ಕೆ ಪಡೆದು, ಉಗ್ರಕೃತ್ಯಕ್ಕೆ ಸಜ್ಜಾಗಿದ್ದ ಎಂದು ಹೇಳಲಾಗುತ್ತಿದೆ.

ನಂತರ ಕ್ಯಾಪ್ಟನ್​ ಮಚ್ಚಾರ್​, ಅಪ್ರತೀಮ ಸಾಹಸ ಪ್ರದರ್ಶಿಸಿ, ಕಾಕ್​ಪಿಟ್​ ಬಾಗಿಲನ್ನು ತೆರೆದ ಹಿನ್ನಲೆ, ಪ್ರಯಾಣಿಕರು ಆಗಂತುಕನನ್ನು ಕಟ್ಟಿಹಾಕಿ, ಸಹಾಯಕ ಪೈಲಟ್​ಗಳು ವಿಮಾನವನ್ನು ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದರು.

ನಂತರ ಈ ಆರೋಪಿ, ಹಮಾಮ್ ಅಲ್ಹಮ್ಮಮಿ ನನ್ನು ಸೌದಿಯಲ್ಲಿ ಬಂಧಿಸಿಟ್ಟಿದ್ದು, ನಂತರ ಯುಎಇಗೆ ಇವನನ್ನು ಹಸ್ತಾಂತರ ಮಾಡಲಾಗಿತ್ತು. ಈಗ ಈ ಹಮಾಮ್ ಅಲ್ಹಮ್ಮಮಿ ಅನ್ನು ವಿಚಾರಣೆಗೆ ಒಳಪಡಿಸಿರುವ ಯುಎಇ ಅಧಿಕಾರಗಳ ವರದಿ ಈಗ ಬಹಿರಂಗಗೊಂಡಿದೆ.

ಇದೊಂದು ಭಯೋತ್ಪಾದಕ ಕೃತ್ಯ!

ಜಾಗತಿಕ ಮಾಧ್ಯಮಗಳು ವರದಿ ಮಾಡುತ್ತಿರುವ ಪ್ರಕಾರ, ಈ ಘಟನೆಯನ್ನು ಯುಎಇ 'ಭಯೋತ್ಪಾದಕ ಕೃತ್ಯ' ವೆಂದು ಬಣ್ಣಿಸಿದೆ. ಕ್ಯಾಪ್ಟನ್​ ಮಚ್ಚಾರ್​ನನ್ನು ಸದೆಬಡಿದು, ವಿಮಾನವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದು ಈ ಹಮಾಮ್ ಅಲ್ಹಮ್ಮಮಿಯ ಉದ್ದೇಶವಾಗಿತ್ತು ಎಂದಿದೆ.

ಅಂತಯೇ, ವಶಕ್ಕೆ ತೆಗೆದುಕೊಂಡ ವಿಮಾನವನ್ನು, ತನ್ನನ್ನು ಸೇರಿದಂತೆ ಎಲ್ಲಾ ಪ್ರಯಾಣಿಕರನ್ನು ವಿಮಾನ ಕ್ರ್ಯಾಶ್​ ಮಾಡುವ ಮೂಲಕ ಉಗ್ರಕೃಶ್ಯಕ್ಕೆ ಚಾಲನೆ ನೀಡುವುದು ಇತನ ಗುರಿಯಾಗಿತ್ತೆಂದು ಹೇಳಿದೆ. ಆದರೆ, ಅವರ ಅದೃಷ್ಟ ಕೆಟ್ಟಿತ್ತು, ಸ್ಮಿತ್​ ಮಚ್ಚಾರ್​, ಕಾಕ್​ಪಿಟ್​ ದ್ವಾರವನ್ನು ತೆರೆಯುವಲ್ಲಿ ಯಶಸ್ವಿಯಾದ ಹಿನ್ನಲೆ ನಡೆಯಲಿದ್ದ ದುರ್ಘಟನೆ ವಿಫಲವಾಯಿತೆಂದು ಯುಎಇ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಚಾಕು ಅಲ್ಲ, ಕೊಡಲಿಯಿಂದ ದಾಳಿ!

ಇಷ್ಟು ದಿನ ಹೊರಬಂದ ಮಾಹಿತಿ ಪ್ರಕಾರ, ಸಹ-ಪೈಲಟ್​ ಹಮಾಮ್ ಅಲ್ಹಮ್ಮಮಿ ಪಾಕೆಟ್​ ಚಾಕು ಮೂಲಕ ಸ್ಮಿತ್​ ಮಚ್ಚಾರ್​ ಮೇಲೆ ಹಲ್ಲೆ ನಡೆಸಿದ್ದ ಎಂದು ಹೇಳಲಾಗುತ್ತಿತ್ತು. ಆದರೆ ಯುಎಇ ನೀಡಿರುವ ಮಾಹಿತಿ ಪ್ರಕಾರ, ವಿಮಾನದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾದಾಗ ಗಾಜನ್ನು ಒಡೆಯಲು ಕೊಡಲಿಯೊಂದನ್ನು ಇಟ್ಟಿರಲಾಗುತ್ತದೆ. ಈ ಕೊಡಲಿಯನ್ನು ಆಯುಧವಾಗಿ ಬಳಸಿಕೊಂಡು ಹಮಾಮ್ ಅಲ್ಹಮ್ಮಮಿ, ಸ್ಮಿತ್​ ಮಚ್ಚಾರ್​ ಮೇಲೆ ದಾಳಿ ನಡೆಸಿದ್ದಾನೆಂದು ತಿಳಿಸಿದೆ.

Also Read
ಅಲ್-ಖೈದಾಗೆ ಸಮರ್ಥನೆ,, ಮಹಿಳೆಯರ ಬಗ್ಗೆ ತಾತ್ಸಾರ! ಚಾಕು ಇರಿದ ಸಹ-ಪೈಲಟ್‌ "ಹಮಾಮ್ ಅಲ್ಹಮ್ಮಮಿ" ಹಿನ್ನಲೆ ಏನು ಗೊತ್ತಾ? Hamam Al Hammami
UAE investigative agencies make an explosive revelation: the attack was carried out with an axe, not a pocket knife.

ತನಿಖೆ ಮುಂದುವರಿದೆ...

ಇದು ಕೇವಲ ತನಿಖೆಯ ಪ್ರಾರಂಭಿಕ ಹೇಳಿಕೆ ಅಥವಾ ಮಾಹಿತಿಗಳಾಗಿದ್ದು, ಈ ಕೃತ್ಯಕ್ಕೆ ಹಮಾಮ್ ಅಲ್ಹಮ್ಮಮಿ ಮುಂದಾಗಿದ್ದೇಕೆ? ಇವನಿಗೆ ಯಾವುದಾದರೂ ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕವಿದೆಯೇ? ಇದರ ಹಿಂದಿರುವ ಕೈವಾಡ ಯಾರದ್ದು? ಇದೇ ವಿಮಾನವನ್ನು ಏಕೆ ಆಯ್ದುಕೊಂಡ? ಎಂಬೆಲ್ಲಾ ಪ್ರಶ್ನೆಗಳಿಗೆ ಮುಂದೆ ನಡೆಯಲಿರುವ ತನಿಖೆ ಉತ್ತರ ನೀಡಲಿದೆ.

ಸದ್ಯ, ವಿಮಾನದಲ್ಲಿ ದೊರೆತಿರುವ ಸಾಂದರ್ಭಿಕ ಸಾಕ್ಷಿ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಯುಎಇ ಅಧಿಕಾರಿಗಳು ಸದ್ಯದಲ್ಲೇ, ಆಸ್ಪತ್ರೆಯಲ್ಲಿರುವ ಕ್ಯಾಪ್ಟನ್​ ಸ್ಮಿತ್​ ಮಚ್ಚಾರ್​ ಹಾಗೂ ಆರೋಪಿ ಹಮಾಮ್ ಅಲ್ಹಮ್ಮಮಿಯ ಹೇಳಿಕೆಯನ್ನು ದಾಖಲಿಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net