ನೇಪಾಳ ಪ್ರವಾಹದ ಮಧ್ಯೆ ಇದೆಂಥಾ ವಿಕೃತ ಮನಸ್ಥಿತಿ; ಮೃತರ ದೇಹದಿಂದ ಚಿನ್ನದ ಓಲೆ ಕಳವು, ಇಬ್ಬರ ಬಂಧನ..Nepal Flood

They Dragged Nepal Flood Victim From River By Hair, Then Stole Her Earrings
They Dragged Nepal Flood Victim From River By Hair, Then Stole Her Earrings
Published on

ಪ್ರಮುಖ ಮುಖ್ಯಾಂಶಗಳು

  • ನಾರಾಯಣಿ ನದಿಯಲ್ಲಿ ಕೊಚ್ಚಿಹೋಗಿದ್ದ ಮಹಿಳೆಯ ಮೃತದೇಹದಿಂದ ಚಿನ್ನದ ಓಲೆ ಕಳವು.
  • ಮೃತದೇಹದಿಂದ ಒಡವೆ ಕದಿಯುತ್ತಿದ್ದ ವೈರಲ್ ವೀಡಿಯೊ ಆಧರಿಸಿ ಇಬ್ಬರ ಬಂಧನ.
  • ಮದನ್ ಗುರಂಗ್ (25) ಮತ್ತು ಉಮೇಶ್ ಚೌಧರಿ (38) ಬಂಧಿತ ಆರೋಪಿಗಳು.

Nepal Flood Victim From River By Hair, Then Stole Her Earrings: 

ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿದ   ಭೀಕರ ಪ್ರವಾಹದಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ಪ್ರವಾಹದಿಂದಾಗಿ ಇಲ್ಲಿಯವರೆಗೂ469 ಮಂದಿ ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಮೃತರ ದೇಹದಲ್ಲಿರುವ ಚಿನ್ನದ ಒಡವೆ ಕಳುವು ಮಾಡುತ್ತಿರುದವ ದೃಶ್ಯಗಳು ವೈರಲ್​ ಆಗಿತ್ತು. ಇದನ್ನು ಆಧರಿಸಿ ತನಿಖೆ ಶುರು ಮಾಡಿದ ಪೊಲೀಸರು,  ಇಬ್ಬರನ್ನು ಬಂಧಿಸಿದ್ದಾರೆ. 


ವಿಡಿಯೋದಲ್ಲಿ ಏನಿದೆ?

ವೈರಲ್ ಆದ ಕ್ಲಿಪ್‌ನಲ್ಲಿ, ಮರದ ಹಲಗೆಗಳು ಮತ್ತು ಆಕೆಯ ಕೂದಲು  ಎಳೆದು ಮಹಿಳೆಯ ಮೃತದೇಹ ಹೊರತಗೆಯುವ ದುಷ್ಕರ್ಮಿಗಳು, ಸುತ್ತಲೂ ಜನರು ನಿಂತು ವೀಡಿಯೊ ಮಾಡುತ್ತಿದ್ದರೂ ಲೆಕ್ಕಿಸದೆ ಎರಡೂ ಕಿವಿಗಳಿಂದ ಓಲೆಗಳನ್ನು ಕಳವು ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳುವುದು 41 ಸೆಕೆಂಡ್‌ಗಳ ವೀಡಿಯೋ ಇದೆ. 
ವಿಡಿಯೋ ವೈರಲ್ ಆಗುತ್ತಲೇ ಎಚ್ಚೆತ್ತ  ಚಿತ್ವಾನ್ ಪೊಲೀಸರು, 25 ವರ್ಷದ ಮದನ್​ ಗುರಂಗ್​  ಹಾಗೂ 38 ವರ್ಷದ ಉಮೇಶ್​ ಚೌಧರಿ ಎಂಬಾತನನ್ನು ಬಂಧಿಸಿದ್ದಾರೆ.  ಗುರುವಾರ ಭರತ್‌ಪುರ ಮೆಟ್ರೋಪಾಲಿಟನ್ ಸಿಟಿ-1 ರ ಪೋಖರಾ ಬಸ್ ನಿಲ್ದಾಣದ ಬಳಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಸಂಕಷ್ಟದ ಸಮಯದಲ್ಲಿ ಸಂತ್ರಸ್ತರನ್ನು ಗುರಿಯಾಗಿಸಿಕೊಂಡು ಲೂಟಿ ಮಾಡುವುದು ಅಥವಾ ಯಾವುದೇ ರೀತಿಯ ಅಮಾನವೀಯ ಕೃತ್ಯಗಳನ್ನು ಸಹಿಸೋದಿಲ್ಲ ಎಂದು ಹೇಳಿದ್ದಾರೆ. 

ಭೀಕರ ಪ್ರವಾಹ

ಬುಧವಾರ ಟಿಬೆಟ್​ ಮತ್ತು ನೇಪಾಳ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಬಂದರು ಕಟ್ಟಡ ಮತ್ತು ಬಸ್ ನಿಲುಗಡೆ ಪ್ರದೇಶವು ಮುಳುಗಿಹೋಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಾಸರಿ 1.5 ಮೀಟರ್‌ಗಳಿಗಿಂತ (5 ಅಡಿ) ಹೆಚ್ಚು ಆಳದಲ್ಲಿ ಕೆಸರು ಉಳಿದಿದೆ ಎಂದು ಚೀನಾದ ರಾಜ್ಯ ಪ್ರಸಾರ ಸಂಸ್ಥೆ ವರದಿ ಮಾಡಿದೆ. ಈ ಪ್ರದೇಶದಲ್ಲಿ ಮಳೆ ಮುಂದುವರಿದಿರುವುದರಿಂದ ರಸ್ತೆಗಳು ಹಾನಿಗೀಡಾಗಿದ್ದು,ಎರಡನೇ ಬಾರಿಗೆ  ಭೂಕುಸಿತಗಳು ಸಂಭವಿಸಬಹುದು ಎಂದು ಎಚ್ಚರಿಕೆ ಕೊಡಲಾಗಿದೆ. ಪ್ರವಾಹದಿಂದಾಗಿ ಸಾವಿರಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ರಕ್ಷಣಾ ತಂಡಗಳುಶೋಧ ನಡೆಸುತ್ತಿವೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net