ಸ್ಥಳದಲ್ಲಿನ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೇನೆ ನಡೆಸಿದ ಗುಂಡಿನ ದಾಳಿಯಿಂದ ಪ್ರತಿಭಟನಾಕಾರರ ಮೃತದೇಹಗಳು ರಸ್ತೆಗಳಲ್ಲಿ ಬಿದ್ದಿರುವುದು ಕಂಡುಬಂದಿದೆ. ಇನ್ನೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸ್ ಒಬ್ಬ, ರಾವಲಕೋಟ್ ಭೀಕರ ಪರಿಸ್ಥಿತಿಯನ್ನು ಅನುಭವಿಸುತ್ತಿದೆ. ಇಡೀ ಪ್ರದೇಶ ಮೃತದೇಹಗಳು ಮತ್ತು ಗಾಯಾಳುಗಳಿಂದ ತುಂಬಿದೆ. ಇದೀಗ ನಮ್ಮೊಂದಿಗೆ ನಿಂತುಕೊಳ್ಳಿ. ದಯವಿಟ್ಟು, ನಮ್ಮೊಂದಿಗೆ ನಿಂತುಕೊಳ್ಳಿ ಎಂದು ವಿನಂತಿಸಿದ್ದಾರೆ.