ಈ ಮಾತುಕತೆ ಅಂದುಕೊಂಡಷ್ಟು ಸುಲಭವಲ್ಲ: ವಿಶ್ವಶಾಂತಿಗಾಗಿ ನಾವು ಮುಂದಾಗಿದ್ದೆವೆ: ಪಾಕ್​ ಮಾಜಿ ಕಮಿಷ​ನರ್​! Pakistan on Peace Talks

ಈ ಒಪ್ಪಂದದ ಮಾತುಕತೆ ಬಹಳ ಕಷ್ಟಕರ: ಪಾಕ್​ ಮಾಜಿ ಕಮಿಷ​ನರ್​
ಈ ಒಪ್ಪಂದದ ಮಾತುಕತೆ ಬಹಳ ಕಷ್ಟಕರ: ಪಾಕ್​ ಮಾಜಿ ಕಮಿಷ​ನರ್​
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯ ಯುದ್ಧದಲ್ಲಿ ಕದನ ವಿರಾಮ ಘೋಷಣೆ
  • ಪಾಕಿಸ್ತಾನದಲ್ಲಿ ನಡೆಯುತ್ತಿರಯುವ ಶಾಂತಿ ಮಾತುಕತೆ
  • ಈ ಒಪ್ಪಂದದ ಮಾತುಕತೆ ಬಹಳ ಕಷ್ಟಕರ: ಪಾಕ್​ ಮಾಜಿ ಕಮಿಷ​ನರ್​
ಪಾಕಿಸ್ತಾನ: ಮಧ್ಯಪ್ರಾಚ್ಯದಲ್ಲಿ ಕಳೆದ 40 ದಿನಗಳಿಂದ ನಡೆಯುತ್ತಿದ್ದ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್ ಎಂಬಂತೆ ಡೊನಾಲ್ಡ್​ ಟ್ರಂಪ್​ 14 ದಿನಗಳ ಕದನ ವಿರಾಮವನ್ನು ಘೋಷಿಸಿದ್ದಾರೆ. ಅದರಂತೆ ಈ ಶಾಂತಿ ಮಾತುಕತೆ ಈಗ ಪಾಕಿಸ್ತಾನದ (Pakistan on Peace Talks) ಇಸ್ಲಾಮಾಬಾದ್​ನಲ್ಲಿ ನಡಡೆಯುತ್ತಿದೆ.

ಈ ಮಾತುಕತೆ ಕಷ್ಟಕರ: ಪಾಕ್ ಹೈ ಕಮಿಷ​ನರ್​

ಈ ಶಾಂತಿ ಮಾತುಕತೆ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಮಾಜಿ ಹೈ ಕಮಿಷ್​ನರ್​, ಅಬ್ದುಲ್​ ಬಷಿತ್​ ಅಮೆರಿಕ ಮತ್ತು ಇರಾನ್​ ನಡುವಿನ ಮಾತುಕತೆ ಬಹಳ ಸುಲಭವಾಗಿ ನೆರವೇರುವ ಕೆಲಸವೇನಲ್ಲ. ಒಂದು ಶಾಂತಿ ಸಭೆ ಸಫಲವಾಗ ಬೇಕಾದರೆ, ಅಲ್ಲಿ ಎರಡೂ ಪಕ್ಷಗಳು ಒಬ್ಬರ ಮಾತನ್ನು ಒಬ್ಬರು ಗೌರವಿಸಬೇಕು ಎಂದಿದ್ದಾರೆ.

ಪಾಕಿಸ್ತಾನ ತನ್ನ ಸಂಪೂರ್ಣ ಪ್ರಯತ್ನ ಮಾಡಲಿದೆ

ಆದರೆ ಈ ಮಾತುಕತೆ ಯಶಸ್ವಿಯಾಗವಲ್ಲಿ ಪಾಕಿಸ್ತಾನಕ್ಕೆ ವಿಶ್ವಾಸವಿದೆ ಹಾಯೆಗೇ ಪಾಕ್​ ಈ ಒಪ್ಪಂದ ಸಫಲವಾಗುವಂತೆ ನೋಡಿಕೊಳ್ಳಲು ತನ್ನ ಶೇ. 100 ರಷ್ಟು ಪ್ರಯತ್ನ ಪಡಲಿದೆ. ಏಕೆಂದರೆ ನಮಗೆ ವಿಶ್ವಶಾಂತಿ ಬಹಳ ಮುಖ್ಯ ಎಂದು ಬಷಿತ್​ ಹೇಳಿದ್ದಾರೆ.
ಇಸ್ಲಾಮಾಬಾದ್​ನಲ್ಲಿ ನಡೆಯುತ್ತಿರುವ ಶಾಂತಿ ಸಭೆ
ಇರಾನ್​ ಮೇಲೆ ಅಮೆರಿಕ ಮತ್ತು ಇಸ್ರೇಲ್​ ದಾಳಿ ಪ್ರಾರಂಭಿಸಿ 40 ದಿನ ಕಳೆದ ನಂತರ ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, 14 ದಿನಗಳ ಕದನ ವಿರಾಮವನ್ನು ಘೋಷಿಸಿದರು. ಈ ಕದನ ವಿರಾಮವನ್ನು ಇರಾನ್​ ಒಪ್ಪಿಕೊಳ್ಳುವ ಮೊದಲು ತಮ್ಮ 10 ಷರತ್ತುಗಳನ್ನು ಮೊದಲು ಒಪ್ಪಿಕೊಳ್ಳಬೇಕು, ನಂತರ ಶಾಂತಿ ಮಾತುಕತೆ ನಡೆಸುವ ಎಂದು ಇರಾನ್​ ಹೇಳಿದೆ.
ಅದರೆ ಕದನ ವಿರಾಮದ ಹೊರತಾಗಿ ಕೂಡ ಇಸ್ರೇಲ್​ ಇರಾನಿನ ಮಿತ್ರ ದೇಶ ಲೆಬನಾನ್​ ಮೇಲೆ ವೈಮಾನಿಕ ದಾಳಿ ನಡೆಸಿ, ಸುಮಾರು 250 ಜನರ ಸಾವಿಗೆ ಕಾರಣವಾಗಿದೆ. ಈಗ ಇರಾನಿನ ಷರತ್ತು ಮತ್ತು ಶಾಶ್ವತ ಶಾಂತಿ ಸ್ಥಾಪನಗೆಗಾಗಿ ಅಮೆರಿಕ ಮತ್ತು ಇರಾನಿನ ಶಾಂತಿ ಸ್ಥಾಪನಾ ನಿಯೋಗ ಪಾಕಿಸ್ತಾನದ ಇಸ್ಲಾಮಾಬಾದ್​ನ್ನು ತಲುಪಿದೆ.

ಒಪ್ಪಂದ ಸಾಧ್ಯವಾಗದಿದ್ದರೆ ಇರಾನ್​ ಉಡೀಸ್: ಟ್ರಂಪ್​!

ಒಂದು ಕಡೆ ಶಾಂತಿ ಮಂತ್ರ ಬೋಧಿಸುತ್ತಿರುವ ಅಮೆರಿಕಾ ಇನ್ನೊಂದು ಕಡೆ ತನ್ನ ನೈಕಾಪಡೆಯನ್ನು ಹೊರ್ಮುಜ್ ಜಲಸಂಧಿಯತ್ತ ರವಾನಿಸುತ್ತಿದೆ ಎಂದು ತಿಳಿದು ಬಂದಿದೆ. ಶಾಂತಿ ಒಪ್ಪಂದದ ಕುರಿತು ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಈ ಮಾತುಕತೆ ಮುರಿದು ಬಿದ್ದರೆ ನಮ್ಮ ಸೈನ್ಯ ಸಶಕ್ತವಾಗಿದೆ, ಇರಾನ್​ನನ್ನು ಹೇಗೆ ಮಣಿಸಬೇಕೆಂದು ನಮಗೆ ತಿಳಿದಿದೆ ಎಂದು ಬೆದರಿಕೆ ಹಾಕಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net