ಶಸ್ತ್ರಾಸ್ತ್ರಗಳ ಪಟ್ಟಿ ಸ್ಯಾಂಪಲ್ ಅಷ್ಟೇ.. ಅಸಲಿ ಆಟ ಇನ್ನು ಬಾಕಿ ಇದೆ! ಅಮೆರಿಕದ ಡೆಡ್ಲಿ ವೆಪನ್ಸ್ ಕಂಡು ಬೆಚ್ಚಿಬಿದ್ದ ಜಗತ್ತು..? US Weapons List

ಶಸ್ತ್ರಾಸ್ತ್ರಗಳ ಪಟ್ಟಿ ಸ್ಯಾಂಪಲ್ ಅಷ್ಟೇ.. ಅಸಲಿ ಆಟ ಇನ್ನು ಬಾಕಿ ಇದೆ! ಅಮೆರಿಕದ ಡೆಡ್ಲಿ ವೆಪನ್ಸ್ ಕಂಡು ಬೆಚ್ಚಿಬಿದ್ದ ಜಗತ್ತು..?
ಶಸ್ತ್ರಾಸ್ತ್ರಗಳ ಪಟ್ಟಿ ಸ್ಯಾಂಪಲ್ ಅಷ್ಟೇ.. ಅಸಲಿ ಆಟ ಇನ್ನು ಬಾಕಿ ಇದೆ! ಅಮೆರಿಕದ ಡೆಡ್ಲಿ ವೆಪನ್ಸ್ ಕಂಡು ಬೆಚ್ಚಿಬಿದ್ದ ಜಗತ್ತು..?
Published on
ನ್ಯೂಯಾರ್ಕ್: ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿಯನ್ನು ಹತಗೈದ ಅಮೆರಿಕದ ಆಪರೇಷನ್ ಎಪಿಕ್ ಫ್ಯೂರಿ (US Weapons List) ಕಾರ್ಯಾಚರಣೆಯು ಇತಿಹಾಸದ ಅತ್ಯಂತ ಭೀಕರ ಮತ್ತು ಅತ್ಯಾಧುನಿಕ ಮಿಲಿಟರಿ ಆಪರೇಷನ್‌ಗಳಲ್ಲಿ ಒಂದಾಗಿ ದಾಖಲಾಗಿದೆ. ಅಮೆರಿಕದ ಸೆಂಟ್ರಲ್ ಕಮಾಂಡ್ ಈ ಕಾರ್ಯಾಚರಣೆಯಲ್ಲಿ ಬಳಸಲಾದ ವಿನಾಶಕಾರಿ ಶಸ್ತ್ರಾಸ್ತ್ರಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಇಡೀ ಜಗತ್ತೇ ಬೆಚ್ಚಿಬಿದ್ದಿದೆ.

1. ಬಿ-2 ಸ್ಟೆಲ್ತ್ ಮತ್ತು ಸೂಸೈಡ್ ಡ್ರೋನ್‌ಗಳ ಆರ್ಭಟ

ಈ ಕಾರ್ಯಾಚರಣೆಯ ಪ್ರಮುಖ ಆಕರ್ಷಣೆ ಎಂದರೆ ಅಮೆರಿಕದ ಹೆಮ್ಮೆಯ B-2 ಸ್ಟೆಲ್ತ್ ಬಾಂಬರ್‌ಗಳು. ರೇಡಾರ್‌ಗಳಿಗೆ ಸಿಗದ ಈ ದೈತ್ಯ ವಿಮಾನಗಳು ಇರಾನ್‌ನ ಅತ್ಯಂತ ಆಳವಾದ ಬಂಕರ್‌ಗಳನ್ನು ಧ್ವಂಸಗೊಳಿಸಿವೆ. ವಿಶೇಷವೆಂದರೆ, ಇರಾನ್‌ನ ವಿನ್ಯಾಸವನ್ನೇ ಹೋಲುವ ಕಡಿಮೆ ವೆಚ್ಚದ ಒನ್‌-ವೇ ಅಟ್ಯಾಕ್ ಡ್ರೋನ್ ಅಥವಾ ಸೂಸೈಡ್ ಡ್ರೋನ್‌ಗಳನ್ನು ಅಮೆರಿಕ ಮೊದಲ ಬಾರಿಗೆ ಯುದ್ಧ ಭೂಮಿಯಲ್ಲಿ ಪ್ರಯೋಗಿಸಿದೆ. ಇರಾನ್‌ನ ತಂತ್ರಜ್ಞಾನವನ್ನೇ ಬಳಸಿ ಇರಾನ್ ಅನ್ನು ಮಟ್ಟಹಾಕಿದ ಟ್ರಂಪ್ ತಂತ್ರಗಾರಿಕೆ ಇದಾಗಿದೆ.

2. ಆಗಸದಿಂದ ಆವರಿಸಿದ ಮೃತ್ಯು: ಯುದ್ಧ ವಿಮಾನಗಳ ಸೈನ್ಯ

ಅಮೆರಿಕವು ತನ್ನ ವಾಯುಪಡೆಯ ಅಕ್ಷರಶಃ ಎಲ್ಲಾ ಬಲಿಷ್ಠ ಯುದ್ಧ ವಿಮಾನಗಳನ್ನು ಟೆಹ್ರಾನ್ ಮೇಲೆ ಹರಿಬಿಟ್ಟಿದೆ.
F-35 ಮತ್ತು F-22 ಸ್ಟೆಲ್ತ್ ಫೈಟರ್‌ಗಳು: ಶತ್ರುಗಳ ಕಣ್ಣಿಗೆ ಬೀಳದೆ ಕ್ಷಿಪಣಿ ದಾಳಿ ನಡೆಸಲು ಇವುಗಳನ್ನು ಬಳಸಲಾಗಿದೆ.
A-10 ಅಟ್ಯಾಕ್ ಜೆಟ್ಸ್: ಇರಾನ್‌ನ ಟ್ಯಾಂಕ್‌ಗಳು ಮತ್ತು ನೆಲದ ಮೇಲಿನ ಮಿಲಿಟರಿ ನೆಲೆಗಳನ್ನು ಸದೆಬಡಿಯಲು ಇವು ನೆರವಾಗಿವೆ.
F-18 ಮತ್ತು F-16 ಜೆಟ್‌ಗಳು: ನಿರಂತರವಾಗಿ ಇರಾನ್‌ನ ವಾಯುಗಡಿಯಲ್ಲಿ ಸುತ್ತುವರಿದು ಶತ್ರು ವಿಮಾನಗಳನ್ನು ಹೊಡೆದುರುಳಿಸಿವೆ.

3. ಕ್ಷಿಪಣಿ ಪ್ರತಿರೋಧಕ ವ್ಯವಸ್ಥೆ

ಇರಾನ್ ನಡೆಸಬಹುದಾದ ಪ್ರತಿ-ದಾಳಿಯನ್ನು ಎದುರಿಸಲು ಅಮೆರಿಕವು ತದ್​(THAAD) ಮತ್ತು ಪೇಟ್ರಿಯಾಟ್ ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಿತ್ತು. ಇರಾನ್ ಉಡಾಯಿಸಿದ ನೂರಾರು ಕ್ಷಿಪಣಿಗಳನ್ನು ಇವು ಮಧ್ಯದಲ್ಲೇ ಹೊಡೆದುರುಳಿಸುವ ಮೂಲಕ ಅಮೆರಿಕದ ನೆಲೆಗಳನ್ನು ರಕ್ಷಿಸಿವೆ.

4. ಸಮುದ್ರದಿಂದಲೂ ಸುತ್ತುವರಿದ ಸಂಚಕಾರ

ಪರ್ಶಿಯನ್ ಗಲ್ಫ್‌ನಲ್ಲಿ ಅಮೆರಿಕದ ಅಣುಶಕ್ತಿ ಚಾಲಿತ ಯುದ್ಧನೌಕೆಗಳು ಮತ್ತು ಗೈಡೆಡ್-ಮಿಸೈಲ್ ಡಿಸ್ಟ್ರಾಯರ್‌ಗಳು ಬೀಡುಬಿಟ್ಟಿವೆ. ಇವುಗಳಿಂದ ಉಡಾವಣೆಯಾದ ಟೊಮಾಹಾಕ್ ಕ್ರೂಸ್ ಕ್ಷಿಪಣಿಗಳು ಖಮೇನಿಯ ನಿವಾಸ ಮತ್ತು ಇರಾನ್‌ನ ಪ್ರಮುಖ ನೌಕಾ ನೆಲೆಗಳನ್ನು ಪುಡಿಪುಡಿ ಮಾಡಿವೆ.

5. AI ತಂತ್ರಜ್ಞಾನ ಮತ್ತು ಆಂಥ್ರೋಪಿಕ್ ವಿವಾದ

ಈ ಯುದ್ಧದ ಮಧ್ಯೆ ಒಂದು ರೋಚಕ ವಿಷಯ ಹೊರಬಿದ್ದಿದೆ. ಅಮೆರಿಕದ ಗುಪ್ತಚರ ಇಲಾಖೆಯು ಈ ದಾಳಿಯ ನಿಖರತೆಗಾಗಿ 'ಆಂಥ್ರೋಪಿಕ್' ಎಂಬ ಎಐ ಕಂಪನಿಯ ತಂತ್ರಜ್ಞಾನವನ್ನು ಬಳಸಿಕೊಂಡಿತ್ತು. ಆದರೆ, ಇತ್ತೀಚೆಗಷ್ಟೇ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ಕಂಪನಿಯೊಂದಿಗಿನ ಒಪ್ಪಂದವನ್ನು ನಿಲ್ಲಿಸಲು ಟ್ರಂಪ್ ಆದೇಶಿಸಿದ್ದಾರೆ. ಆದರೂ, ಈ ಕಾರ್ಯಾಚರಣೆಯಲ್ಲಿ ಎಐ ತಂತ್ರಜ್ಞಾನವು ಗುರಿಗಳನ್ನು ಗುರುತಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ವರದಿಗಳು ತಿಳಿಸಿವೆ.

ಯುಎಸ್ ಸೆಂಟ್ರಲ್ ಕಮಾಂಡ್ ಬಿಡುಗಡೆ ಮಾಡಿದ ಪ್ರಮುಖ ಅಸ್ತ್ರಗಳ ಪಟ್ಟಿ

ಬಾಂಬರ್ ವಿಮಾನಗಳು- B-2 ಸ್ಟೆಲ್ತ್ ಬಾಂಬರ್ಸ್
ಡ್ರೋನ್‌ಗಳು- ಲೂಕಾಸ್ ಡ್ರೋನ್ಸ್, MQ-9 ರೀಪರ್ಸ್
ಕ್ಷಿಪಣಿ ವ್ಯವಸ್ಥೆ- THAAD, ಪೇಟ್ರಿಯಾಟ್, ಹಿಮಾರ್ಸ್
ಯುದ್ಧ ವಿಮಾನಗಳು- F-35, F-22, F-18, A-10
ನೌಕಾ ಶಕ್ತಿ- ಅಣುಶಕ್ತಿ ಚಾಲಿತ ಯುದ್ಧನೌಕೆಗಳು, ಡಿಸ್ಟ್ರಾಯರ್ಸ್
ಕಣ್ಗಾವಲು- RC-135 ರೆಕಾನಿಸೆನ್ಸ್, P-8 ಮ್ಯಾರಿಟೈಮ್ ಏರ್‌ಕ್ರಾಫ್ಟ್
ಕೊನೆಯದಾಗಿ ಸೆಂಟ್-ಕಾಮ್ ಒಂದು ಕುತೂಹಲಕಾರಿ ಸಾಲನ್ನು ಸೇರಿಸಿದೆ. ನಾವಿಲ್ಲಿ ಪಟ್ಟಿ ಮಾಡಲಾಗದ ಇನ್ನೂ ಕೆಲವು ವಿಶೇಷ ಸಾಮರ್ಥ್ಯಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಇದು ಅಮೆರಿಕದ ಬಳಿ ಇರುವ ಅತ್ಯಂತ ರಹಸ್ಯ ಶಸ್ತ್ರಾಸ್ತ್ರಗಳ ಕುರಿತು ಜಗತ್ತಿಗೆ ನೀಡಿದ ಎಚ್ಚರಿಕೆಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net