ಬುಧವಾರದಂದು ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ, ಇರಾನ್ ನೌಕಾಪಡೆಯ ಅಧಿಕಾರಿ ಮೊಹಮ್ಮದ್ ಅಕ್ಬರ್ಜಾದೆ, ಪ್ರಸ್ತುತ ಹಾರ್ಮುಜ್ ಜಲಸಂಧಿಯು ಇಸ್ಲಾಮಿಕ್ ರಿಪಬ್ಲಿಕ್ ನೌಕಾಪಡೆಯ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಘೋಷಿಸಿದ್ದಾರೆ. ಈ ಜಲಸಂಧಿಯ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗುಗಳು ಇರಾನ್‌ನ ಕ್ಷಿಪಣಿಗಳು ಅಥವಾ ಡ್ರೋನ್ ದಾಳಿಗೆ ಒಳಗಾಗುವ ಅಪಾಯವಿದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದು ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ, ಏಕೆಂದರೆ ವಿಶ್ವದ ಒಟ್ಟು ತೈಲ ವ್ಯಾಪಾರದ ಶೇ. 20 ಕ್ಕಿಂತ ಹೆಚ್ಚು ಭಾಗ ಈ ಕಿರಿದಾದ ಜಲಸಂಧಿಯ ಮೂಲಕವೇ ಸಾಗುತ್ತದೆ.