ವಿಶ್ವದ ಹಲವು ರಾಷ್ಟ್ರಗಳು ಜನಸಂಖ್ಯೆ ನಿಯಂತ್ರಣದ ವಿಷಯದಲ್ಲಿ ಅನುಸರಿಸಿದ ಕಠಿಣ ಕ್ರಮಗಳಿಂದ ಪ್ರಸ್ತುತ ಜನಸಂಖ್ಯೆಯ ಅಸಮತೋಲನ ಎದುರಿಸುತ್ತಿವೆ. ಇನ್ನು ಕೆಲವು ರಾಷ್ಟ್ರಗಳಲ್ಲಿ ಫಲವತ್ತತೆ ದರ ಕುಸಿದಿರುವುದು, ಜನನ ಪ್ರಮಾಣ ಇಳಿಕೆಗೆ ಕಾರಣವಾಗಿದೆ. ತೈವಾನ್, ದಕ್ಷಿಣ ಕೊರಿಯಾ, ಜಪಾನ್, ಹಾಂಗ್ಕಾಂಗ್, ಮಕಾವು, ಸಿಂಗಾಪುರ, ಇಟಲಿ, ಸ್ಪೇನ್, ಗ್ರೀಸ್, ಪೋಲೆಂಡ್, ಪೋರ್ಚುಗಲ್, ಲಿಥುವೇನಿಯಾ, ಕೆನಡಾ, ಆಸ್ಟ್ರೇಲಿಯಾ, ಲ್ಯಾಟಿನ್ ಅಮೆರಿಕ, ಬ್ರೆಜಿಲ್, ಮೆಕ್ಸಿಕೋದಲ್ಲಿ ಜನನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅಧ್ಯಯನ ವರದಿಗಳ ಪ್ರಕಾರ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈ ನಿಟ್ಟಿನಲ್ಲಿ ಹೆಚ್ಚಿನ ಸಮಸ್ಯೆ ಎದುರಿಸುತ್ತಿವೆ.