ತೈಲ ಮಾರುಕಟ್ಟೆಗೆ ತಟ್ಟಿದ ಯುದ್ಧದ ಬಿಸಿ: ಬ್ಯಾರೆಲ್​ ಕಚ್ಚಾತೈಲಕ್ಕೆ 100 ಡಾಲರ್; ಪೆಟ್ರೋಲ್​-ಡೀಸೆಲ್ ಬೆಲೆ ಏರಿಕೆ?​ Petrol Diesel Price

ಮಧ್ಯಪ್ರಾಚ್ಯ ಯುದ್ಧದ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲ ಬ್ಯಾರೆಲ್ ಬೆಲೆ 100 ಡಾಲರ್​ ಸಮೀಪಕ್ಕೆ ತಲುಪಿದೆ
ಮಧ್ಯಪ್ರಾಚ್ಯ ಯುದ್ಧದ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲ ಬ್ಯಾರೆಲ್ ಬೆಲೆ 100 ಡಾಲರ್​ ಸಮೀಪಕ್ಕೆ ತಲುಪಿದೆ
Published on
ನವದೆಹಲಿ: ಕಳೆದ ಏಳು ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್​ - ಅಮೆರಿಕ ಸಂಘರ್ಷ ಶಾಂತಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವ ಲಕ್ಷಣ ಕಂಡುಬರುತ್ತಿಲ್ಲ. 
ಈ ಸಂಘರ್ಷದ ಮೂಲ ಬೇರಾಗಿರುವ ಹೊರ್ಮುಜ್​ ಜಲಸಂಧಿಯಲ್ಲಿ ತೈಲ ಟ್ಯಾಂಕರ್​ಗಳ ಓಡಾಟ ಕಡಿಮೆಯಾಗಿರುವ ಹಿನ್ನಲೆ ಜಾಗತಿಕವಾಗಿ ಕಚ್ಚಾ ತೈಲದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬರುತ್ತಿದೆ. ಈ ಪ್ರವೃತ್ತಿ ಹೀಗೆ ಮಂದುವರಿದರೆ ಕೆಲ ದಿನಗಳಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ (Petrol Diesel Price) ಗಳಲ್ಲಿ ಕೂಡ ಏರಿಕೆ ಸಂಭವಿಸಲಿದೆ. 
ಕಳೆದ ಕೆಲ ದಿನಗಳ ಮಟ್ಟಿಗೆ ಇರಾನ್​ ಮತ್ತು ಅಮೆರಿಕ ನಡುವೆ ಶಾಂತಿ ಸ್ಥಾಪನೆಯಾಗಿದ್ದ ಹಿನ್ನಲೆ, ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು. ಆದರೆ, ಈಗ ಮತ್ತೆ ದಾಳಿ-ಪ್ರತಿದಾಳಿ ಆರಂಭವಾದ ಹಿನ್ನಲೆ ತೈಲದ ಬೆಲೆ ಮತ್ತೆ ಗಗನದತ್ತ ಹೆಜ್ಜೆ ಹಾಕುತ್ತಿದೆ.

ಬ್ಯಾರೆಲ್​ಗೆ 100 ಡಾಲರ್​!

ಇರಾನ್​ ಮೇಲೆ ಅಮೆರಿಕ ಹಾಗೂ ಇಸ್ರೇಲ್​ ಜಂಟಿ ದಾಳಿ ನಡೆಸಿದಾಗ ಇರಾನ್​ ಹೊರ್ಮುಜ್​ ಜಲಸಂಧಿಯನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದ ಹಿನ್ನಲೆ ತೈಲ ಮಾರುಕಟ್ಟೆಯಲ್ಲಿ ವ್ಯತ್ಯಯ ಕಂಡುಬಂದು ಒಂದು ಬ್ಯಾರೆಲ್​ ಕಚ್ಚಾ ತೈಲದ ಬೆಲೆ ಸುಮಾರು 150 ಡಾಲರ್​ ತಲುಪಿತ್ತು.
ನಂತರದ ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಕದನ ವಿರಾಮ ಘೋಷಿಸಿದ ಹಿನ್ನಲೆ ಹೊರ್ಮುಜ್​ನಲ್ಲಿ ಹಡಗುಗಳ ಓಡಾಟ ಪ್ರಾರಂಭವಾಗಿ ತೈಲದ ಬೆಲೆ 100 ಡಾಲರ್​ಕ್ಕಿಂತ ಕಡಿಮೆ ಬೆಲೆಗೆ ಜಾರಿತ್ತು.
ಈಗ ಮತ್ತೆ ಇರಾನ್​ ಮತ್ತು ಅಮೆರಿಕ ಯುದ್ಧೋತ್ಸಾಹಕ್ಕೆ ಮರಳಿದ ಹಿನ್ನಲೆ ಬ್ಯಾರೆಲ್​ ಕಚ್ಚಾತೈಲದ ಬೆಲೆ 100 ಡಾಲರ್​ ಗಡಿ ತಲುಪಿದ್ದು, ಇನ್ನೇನು ಕೆವಲೇ ದಿನಗಳಲ್ಲಿ 100 ಡಾಲರ್​ ದಾಟಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿದ್ದಾರೆ. 

ಹೊರ್ಮುಜ್​ಗೆ ತೈಲ ಬೆಲೆಗೆ ಏನು ಸಂಬಂಧ?  

ಹೊರ್ಮುಜ್ ಜಲಸಂಧಿಯು ಜಾಗತಿಕ ತೈಲ ಪೂರೈಕೆಯ ಅತ್ಯಂತ ಪ್ರಮುಖ ಮಾರ್ಗವಾಗಿದ್ದು, ವಿಶ್ವದ ಒಟ್ಟು ಕಚ್ಚಾ ತೈಲ ಸಾಗಣೆಯ ಶೇ. 20 ರಿಂದ 25 ರಷ್ಟು ಭಾಗವು ಈ ಜಲಮಾರ್ಗದ ಮೂಲಕವೇ ಸಾಗುತ್ತದೆ. ಪ್ರತಿದಿನ ಸುಮಾರು 2 ಕೋಟಿ ಬ್ಯಾರೆಲ್‌ಗಳಷ್ಟು ತೈಲ ಇಲ್ಲಿಂದ ಪ್ರಪಂಚಕ್ಕೆ ರಫ್ತಾಗುತ್ತದೆ. 
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಂಟಾಗಿ ಈ ಮಾರ್ಗದಲ್ಲಿ ತೈಲ ಸಂಚಾರಕ್ಕೆ ತಡೆಯುಂಟಾದರೆ, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಸಾಗಾಣಿಕೆ ವೆಚ್ಚ ಮತ್ತು ವಿಮಾ ದರಗಳು ಗಗನಕ್ಕೇರಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತವೆ. ಇದು ನೇರವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ, (ಏಜನ್ಸೀಸ್​​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net