ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧ ಆರಂಭ: ಇರಾನ್ ಮೇಲೆ ಅಮೆರಿಕ ಭೀಕರ ವಾಯುದಾಳಿ; 14 ನಾಗರಿಕರು ಬಲಿ, 78 ಜನರಿಗೆ ಗಾಯ! America Airstrike Iran
ಇರಾನ್‌ನ ತೈಲ ಹಾಗೂ ಪರಮಾಣು ಘಟಕಗಳ ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಅಂತ್ಯ!
ಇರಾನ್‌ನ ತೈಲ ಹಾಗೂ ಪರಮಾಣು ಘಟಕಗಳ ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ
14 ನಾಗರಿಕರು ಸಾವನ್ನಪ್ಪಿದ್ದು, 78 ಜನ ಗಾಯಗೊಂಡಿರುವುದಾಗು ಮಾಹಿತಿ
ತೆಹ್ರಾನ್: ಕಳೆದ ನಾಲ್ಕೈದು ತಿಂಗಳುಗಳಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಸಂಘರ್ಷಕ್ಕೆ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿತ್ತು. ಹಾಗೆಯೇ ಶಾಶ್ವತ ಪರಿಹಾರಕ್ಕಾಗಿ ಅಮೆರಿಕ ಮತ್ತು ಇರಾನ್ ಮಾತುಕತರಯನ್ನು ನಡೆಸುತ್ತಿತ್ತು.
ಆದರೆ ನಿನ್ನೆ (ಬುಧವಾರ, ಜು.8) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾವು ಇರಾನ್ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಹೇಳಿ ತೆಹ್ರಾನ್ ಮೇಲೆ ದಾಳಿ (America Airstrike Iran) ನಡೆಸಿದ್ದಾರೆ. ಈ ವೈಮಾನಿಕ ದಾಳಿಯಲ್ಲಿ ಸುಮಾರು 14 ಜನ ಸಾವನ್ನಪ್ಪಿದ್ದು, 78 ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆಂದು ಇರಾನಿನ ಮಾಧ್ಯಮಗಳು ವರದಿಮಾಡಿವೆ.
ಅಮೆರಿಕದ ದಾಳಿಯನ್ನು ವಿರೋಧಿಸಿರುವ ಇರಾನ್ ಆರೋಗ್ಯ ಸಚಿವಾಲಯದ ವಕ್ತಾರ, ಅಮೆರಿಕ ನಮ್ಮೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಮೀರಿದೆ. ಅಷ್ಟೇ ಅಲ್ಲದೆ ಹೊರ್ಮುಜ್ ಸುತ್ತಲಿನ ಆಯ್ದ ಐದು ಪ್ರದೇಶಗಳ ಮೇಲೆ ದಾಳಿ ಮಾಡಿದ್ದು, ಇದರಲ್ಲಿ ಸುಮಾರು 14 ಜನ ಸಾವನ್ನಪ್ಪಿದ್ದು 78 ಜನ ಆಸ್ಪತ್ರೆಯಲ್ಲಿ ಸಾವು- ಬದುಕಿನ ಹೋರಾಟ ಮುಂದುವರಿಸಿದ್ದಾರೆಂದು ಹೇಳಿದ್ದಾರೆ.
ಅಮೆರಿಕ ಈ ದಾಳಿಯನ್ನು ನಮ್ಮ ಮಿಲಿಟರಿ ಪಡೆಗಳ ಮೇಲೆ ಅಲ್ಲ, ಬದಲಾಗಿ ತನ್ನ ತೈಲ ಘಟಕ, ಪರಮಾಣು ಘಟಕ ಹಾಗೂ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಇದು ಅಂತಾರಾಷ್ಟ್ರೀಯ ಯುದ್ಧ ನೀತಿಯ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಟ್ರಂಪ್ ಹೇಳಿದ್ದೇನು?
ಟರ್ಕಿ ದೇಶದಲ್ಲಿ ನಡೆಯುತ್ತಿದ್ದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ನ ನಾಯಕರು ಮಾನಸಿಕ ಅಸ್ವಸ್ಥರು, ಅವರೊಂದಿಗೆ ಮಾತುಕತೆ ನಡೆಸುವುದು ವ್ಯರ್ಥ, ಹೀಗಾಗಿ ನಾವು ಕದನ ವಿರಾಮವನ್ನು ಕೊನೆಗೊಳಿಸುತ್ತಿದ್ದೆವೆ ಎಂದಿದ್ದಾರೆ.
ಅದರೆ ಇರಾನ್ ಜೊತೆಗಿನ ರಾಜತಾಂತ್ರಿಕ ಮಾತುಕತೆ ಮುಂದುವರಿಯಲು ಅನುಮತಿ ನೀಡಲಾಗಿದೆ, ನಮ್ಮ ಸಂಧಾನಕಾರರು ಅವರ ಪ್ರಯತ್ನವನ್ನು ನಡೆಸುತ್ತಿದ್ದಾರೆ, ಆದರೆ ಈ ಇರಾನ್‌ನ ಆಡಳಿತಗಾರರು ಸರಿಯಿಲ್ಲ ಎಂದು ಟ್ರಂಪ್ ಕಠಿಣ ಶಬ್ದಗಳನ್ನು ಪ್ರಯೋಗಿಸಿದ್ದಾರೆ.
ಟ್ರಂಪ್ನ ಈ ಹೇಳಿಕೆಯಿಂದಾಗಿ ಜಾಗತಿಕ ಷೇರು, ತೈಲ ಹಾಗೂ ಚಿನ್ನದ ಮಾರಿಕಟ್ಟೆಯಲ್ಲಿ ಭಾರಿ ಹಿಂಜರೆತ ಕಂಡುಬಂದಿದೆ. ಇದರೊಟ್ಟಿಗೆ ಮತ್ತೆ ಹೊರ್ಮುಜ್ ಜಲಸಂಧಿ ಮುಚ್ಚಿದರೆ, ಆಮದು-ರಫ್ತು ಯಾವ ರೀತಿ ನಡೆಯಲಿದೆ? ಎಂಬ ಯಕ್ಷ ಪ್ರಶ್ನೆ ಎಲ್ಲರ ನಿದ್ದೆಯನ್ನು ಹಾಳುಮಾಡುತ್ತಿದೆ, (ಏಜನ್ಸೀಸ್).