'ಎಲ್ ನಿನೊ' ಎಂಬುದು ಸ್ಪ್ಯಾನಿಷ್ ಭಾಷೆಯ ಪದವಾಗಿದ್ದು, ಇದರ ಅರ್ಥ "ಚಿಕ್ಕ ಹುಡುಗ" ಅಥವಾ "ಬಾಲ ಯೇಸು" ಎಂದಾಗುತ್ತದೆ. ದಕ್ಷಿಣ ಅಮೆರಿಕಾದ ಪೆಸಿಫಿಕ್ ಕರಾವಳಿಯಲ್ಲಿರುವ ಪೆರು ಮತ್ತು ಈಕ್ವೆಡಾರ್ ದೇಶದ ಮೀನುಗಾರರು 1600ರ ದಶಕದಲ್ಲೇ ಈ ವಿದ್ಯಮಾನವನ್ನು ಮೊದಲ ಬಾರಿಗೆ ಗುರುತಿಸಿದ್ದರು. ಸಾಗರದ ನೀರು ಅಸಹಜವಾಗಿ ಬಿಸಿಯಾಗುವ ಈ ಪ್ರಕ್ರಿಯೆಯು ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ, ಅಂದರೆ ಕ್ರಿಸ್‌ಮಸ್ ಹಬ್ಬದ ಆಸುಪಾಸಿನಲ್ಲಿ ಗರಿಷ್ಠ ಮಟ್ಟ ತಲುಪುತ್ತಿತ್ತು. ಕ್ರಿಸ್‌ಮಸ್ ಜೀಸಸ್ ಕ್ರೈಸ್ಟ್ ಅವರ ಜನ್ಮದಿನವಾಗಿರುವುದರಿಂದ, ಅಲ್ಲಿನ ಸ್ಥಳೀಯ ಮೀನುಗಾರರು ಸಾಗರದಲ್ಲಿ ಕಂಡುಬರುತ್ತಿದ್ದ ಈ ವಿಶಿಷ್ಟ ಬದಲಾವಣೆಗೆ ಯೇಸುಕ್ರಿಸ್ತನ ಸ್ಮರಣಾರ್ಥವಾಗಿ 'ಎಲ್ ನಿನೊ' (ಬಾಲ ಯೇಸು) ಎಂದು ಹೆಸರಿಟ್ಟರು, (ಏಜೆನ್ಸೀಸ್).