ಸ್ಪ್ಯಾನಿಷ್ ಕಾನೂನಿನ ಪ್ರಕಾರ, ಯಾರು ಸಿಂಹಾಸದ ಉತ್ತರಾಧಿಕಾರಿಯಾಗುತ್ತರೋ, ಅವರು ತಮ್ಮ ಭವಿಷ್ಯದ ಪಾತ್ರಕ್ಕಾಗಿ ಕಡ್ಡಾಯ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯೊಂದಿಗೆ ಮಿಲಿಟರಿ ತರಬೇತಿಯನ್ನು ಪಡೆಯಬೇಕು. ಹಾಗಾಗಿ ಲಿಯೊನೋರ್ ಈ ಎಲ್ಲಾ ತರಬೇತಿಯನ್ನು ಪಡೆಯುತ್ತಿದ್ದಾರೆ. ಸ್ಪೇನ್‌ನಲ್ಲಿ ತನ್ನ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ರಾಜಕುಮಾರಿ ಲಿಯೊನಾರ್ ನೌಕಾ ಪ್ರಯಾಣಗಳು, ವಾಯುಪಡೆ, ಸಮಗ್ರ ಮಿಲಿಟರಿ ತರಬೇತಿಗಳನ್ನು ಪಡೆಯುತ್ತಿದ್ದಾರೆ.