ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷೀಯ ಭದ್ರತಾ ಸಲಹೆಗಾರ ಕಿಮ್ ಕಿ-ಜಂಗ್ ಅವರ ಪ್ರಕಾರ, ನಾವು ಇರಾನ್‌ನಂತಲ್ಲ, ನಮ್ಮ ಬಳಿ ಪ್ರಬಲವಾದ ಸ್ವಯಂ ರಕ್ಷಣಾ ಸಾಮರ್ಥ್ಯವಿದೆ ಎಂದು ಜಗತ್ತಿಗೆ ತೋರಿಸುವುದು ಕಿಮ್ ಉದ್ದೇಶವಾಗಿದೆ. ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿ ನಡೆಯುತ್ತಿರುವ ಬೆನ್ನಲ್ಲೇ, ತಾನು ಪರಮಾಣು ಶಸ್ತ್ರಸಜ್ಜಿತ ದೇಶವೆಂದು ಘೋಷಿಸಿಕೊಂಡಿರುವ ಉತ್ತರ ಕೊರಿಯಾ, ತನ್ನ ಮೇಲೆ ದಾಳಿ ನಡೆಸುವ ಮುನ್ನ ಹತ್ತು ಬಾರಿ ಯೋಚಿಸಿ ಎಂಬ ಎಚ್ಚರಿಕೆಯನ್ನು ಅಮೆರಿಕಕ್ಕೆ ರವಾನಿಸಿದೆ.