ಇರಾನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿರುವ ಚೀನಾ, ಈ ಸಂಘರ್ಷವನ್ನು ಕೊನೆಗೊಳಿಸಲು ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಸಿದೆ. ಅಸೋಸಿಯೇಟೆಡ್ ಪ್ರೆಸ್ (AP) ವರದಿಯ ಪ್ರಕಾರ, ಚೀನಾದ ಅಧಿಕಾರಿಗಳು ನೇರವಾಗಿ ಮತ್ತು ಪಾಕಿಸ್ತಾನ, ಟರ್ಕಿ ಹಾಗೂ ಈಜಿಪ್ಟ್‌ನಂತಹ ಮಧ್ಯವರ್ತಿಗಳ ಮೂಲಕ ಇರಾನ್ ಮೇಲೆ ನಿರಂತರ ಒತ್ತಡ ಹೇರಿದ್ದಾರೆ. ಇರಾನ್ ತನ್ನ ಹಟ ಬಿಟ್ಟು ಶಾಂತಿ ಒಪ್ಪಂದಕ್ಕೆ ಸಹಿ ಹಾಕುವಂತೆ ಮಾಡುವಲ್ಲಿ ಬೀಜಿಂಗ್ ಪ್ರಮುಖ ಪಾತ್ರ ವಹಿಸಿದೆ.