ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಮಹತ್ವದ ಕದನ ವಿರಾಮ ಮಾತುಕತೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಖವಾಜಾ ಆಸಿಫ್ ಎಕ್ಸ್ನಲ್ಲಿ ಇಸ್ರೇಲ್ ವಿರುದ್ಧ ವೀಷ ಕಾರಿದ್ದರು. ಇಸ್ರೇಲ್ ಒಂದು ಕೆಡುಕು ಮತ್ತು ಮಾನವಕುಲಕ್ಕೆ ಶಾಪ. ಇತ್ತ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ ನಡೆಯುತ್ತಿದ್ದರೆ, ಅತ್ತ ಲೆಬನಾನ್‌ನಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದೆ. ಮೊದಲು ಗಾಜಾ, ನಂತರ ಇರಾನ್, ಈಗ ಲೆಬನಾನ್, ಇಸ್ರೇಲ್‌ನ ರಕ್ತಪಾತ ನಿರಂತರವಾಗಿ ಮುಂದುವರಿಯುತ್ತಿದೆ ಎಂದು ಬರೆದುಕೊಂಡಿದ್ದರು.