ಆಯತೊಲ್ಲಾ ಅಲಿ ಖಮೇನಿ ಅವರ ರಾಷ್ಟ್ರಧ್ವಜ ಹೊದಿಸಿದ ಶವಪೆಟ್ಟಿಗೆಯನ್ನು ಟೆಹರಾನ್‌ನ ಗ್ರಾಂಡ್ ಮೊಸಲ್ಲಾದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದು, ಇರಾನ್‌ನ ಹಿರಿಯ ನಾಯಕರು, ಧಾರ್ಮಿಕ ಮುಖಂಡರು ಹಾಗೂ ವಿದೇಶಿ ಗಣ್ಯರು ಬಂದು ಅಂತಿಮ ಗೌರವ ಸಲ್ಲಿಸಿದರು. ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಕಾಲಿಬಾಫ್, ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಮತ್ತು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇರಾನ್ ಸರ್ಕಾರಿ ಮಾಧ್ಯಮಗಳು ಪ್ರಸಾರ ಮಾಡಿದ ದೃಶ್ಯಗಳಲ್ಲಿ ಕಪ್ಪು ವಸ್ತ್ರ ಧರಿಸಿದ ಸಹಸ್ರಾರು ಶೋಕತಪ್ತರು ಪ್ರಾರ್ಥನೆಗಾಗಿ ನೆರೆದಿರುವುದು ಕಂಡುಬಂದಿದ್ದು, ಅಲ್ಲಿನ ಸಾಂಪ್ರದಾಯಿಕ ನಂಬಿಕೆಯಂತೆ ಪುಣ್ಯ ಅಥವಾ ಆಶೀರ್ವಾದ ಪಡೆಯುವ ಸಲುವಾಗಿ ಅನೇಕರು ತಮ್ಮ ಸ್ಕಾರ್ಫ್‌ಗಳು ಹಾಗೂ ವೈಯಕ್ತಿಕ ವಸ್ತುಗಳನ್ನು ಶವಪೆಟ್ಟಿಗೆಗೆ ಮುಟ್ಟಿಸಿ ತರುವಂತೆ ಅಲ್ಲಿನ ಸೇವಕರತ್ತ ಎಸೆಯುತ್ತಿದ್ದರು.