ಇನ್ನು ಘಟನೆಯ ಬಳಿಕ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ರು. ಮೃತ ಸೋಫ್ವಾನ್ ಇತ್ತೀಚೆಗಷ್ಟೇ ಯಾಲಾ ಎಫ್ಸಿ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಸೋಫ್ವಾನ್ ಸಾವಿಗೆ ಯಾಲಾ ಎಫ್ಸಿ ಹಾಗೂ ಥೈಲ್ಯಾಂಡ್ ಫುಟ್ಬಾಲ್ ಅಸೋಸಿಯೇಷನ್ ಸಂತಾಪ ಸೂಚಿಸಿವೆ. ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಅಕಾಲಿಕ ಸಾವಿಗೆ ಕಂಬನಿ ಮಿಡಿದಿದ್ದಾರೆ,(ಏಜೆನ್ಸೀಸ್).