ದುಬೈ ಏರ್ ಶೋ ವೇಳೆ ಭಾರತೀಯ ಯುದ್ಧ ವಿಮಾನ ತೇಜಸ್ ಪತನ: ಪೈಲಟ್ ಸಾವಿಗೀಡಾಗಿರುವ ಶಂಕೆ! Tejas Fighter
ಯುದ್ಧ ವಿಮಾನ ತೇಜಸ್ ಪತನ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಭಾರತೀಯ ಯುದ್ಧ ವಿಮಾನ ತೇಜಸ್ ಪತನ
ದುಬೈನಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದ ವೇಳೆ ದುರಂತ
ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಘಟನೆ
ದುಬೈ: ದುಬೈನಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದ ವೇಳೆ ಭಾರತೀಯ ಯುದ್ಧ ವಿಮಾನ ತೇಜಸ್ ( Tejas Fighter ) ಪತನಗೊಂಡಿರುವುದಾಗಿ ವರದಿಯಾಗಿದೆ. ಈ ಘಟನೆ ಶುಕ್ರವಾರ (ನ.21) ಮಧ್ಯಾಹ್ನ ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಡೆದಿದೆ.
ತೇಜಸ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅಭಿವೃದ್ಧಿಪಡಿಸಿದ ಸಿಂಗಲ್ ಸೀಟಿನ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ) ಆಗಿದೆ. ಸ್ಥಳೀಯ ಸಮಯ ಮಧ್ಯಾಹ್ನ 2.10 ರ ಸುಮಾರಿಗೆ ತೇಜಸ್ ಪತನಗೊಂಡಿದೆ. ಪೈಲಟ್‌ನ ಸ್ಥಿತಿಯ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಪೈಲಟ್ ಹೊರಗೆ ಜಿಗಿದಿದ್ದಾರಾ? ಅಥವಾ ಮೃತಪಟ್ಟಿದ್ದಾರಾ? ಎಂಬುದು ತಿಳಿದುಬರಬೇಕಿದೆ. ಸದ್ಯಕ್ಕೆ ಪೈಲಟ್ ಸಾವಿಗೀಡಾಗಿರುವ ಶಂಕೆ ಮೂಡಿದೆ. ಈ ಕುರಿತು ಭಾರತೀಯ ವಾಯುಪಡೆಯಿಂದ ಅಧಿಕೃತ ಹೇಳಿಕೆಯನ್ನು ನಿರೀಕ್ಷಿಸಲಾಗಿದೆ.
ಅಂದಹಾಗೆ, ವಿಶ್ವದ ಅತಿದೊಡ್ಡ ವಾಯುಯಾನ ಪ್ರದರ್ಶನಗಳಲ್ಲಿ ಒಂದಾದ ದ್ವೈವಾರ್ಷಿಕ ದುಬೈ ಏರ್ ಶೋ ಸಮಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಈ ಘಟನೆಯು ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ತೇಜಸ್ ವಿಮಾನವನ್ನು ಒಳಗೊಂಡ ಎರಡನೇ ಅಪಘಾತ ಇದಾಗಿದೆ. 2024 ಮಾರ್ಚ್ ತಿಂಗಳಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತೇಜಸ್ ಯುದ್ಧವಿಮಾನವು ಪತನಗೊಂಡಿತು. 2001 ರಲ್ಲಿ ಅದರ ಮೊದಲ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು. 23 ವರ್ಷಗಳ ಇತಿಹಾಸದಲ್ಲಿ ರಾಜಸ್ಥಾನದಲ್ಲಿ ಸಂಭವಿಸಿದ ಅಪಘಾತ ಮೊದಲ ಅಪಘಾತವಾಗಿತ್ತು. ಆ ಸಂದರ್ಭದಲ್ಲಿ ಪೈಲಟ್ ಸುರಕ್ಷಿತವಾಗಿ ಹೊರಗೆ ಜಿಗಿದಿದ್ದರು.
ಅಂದಹಾಗೆ, ತೇಜಸ್ ಯುದ್ಧ ವಿಮಾನ, 4.5 ಪೀಳಿಗೆಯ ಬಹು-ಪಾತ್ರದ ಯುದ್ಧ ವಿಮಾನವಾಗಿದ್ದು, ವಾಯು ರಕ್ಷಣಾ ಕಾರ್ಯಾಚರಣೆಗಳು, ನಿಕಟ ಯುದ್ಧ ಕಾರ್ಯಾಚರಣೆಗಳನ್ನು ನಿರ್ವಹಿಸಲು ನಿರ್ಮಿಸಲಾಗಿದೆ. ಇದು ತನ್ನ ವರ್ಗದಲ್ಲಿ ಅತ್ಯಂತ ಹಗುರವಾದ ಮತ್ತು ಚಿಕ್ಕದಾದ ವಿಮಾನಗಳಲ್ಲಿ ಒಂದಾಗಿದೆ, (ಏಜೆನ್ಸೀಸ್).