'ವಯೋನ್' ವರದಿ ಪ್ರಕಾರ, ಕೆಲವು ದಿನಗಳಿಂದ ಸಿಕ್ಕಾಪಟ್ಟೆ ತಲೆನೋವು ಎಂದು ಹೇಳಿದ ವ್ಯಕ್ತಿ, ಈ ನೋವನ್ನು ತಡೆಯಲು ಆಗುತ್ತಿಲ್ಲ ಎಂದು ವೈದ್ಯರ ಬಳಿ ಅಳಲು ತೋಡಿಕೊಂಡರು. ಇವರ ಮಾತನ್ನು ಸೂಕ್ಷ್ಮವಾಗಿ ಆಲಿಸಿದ ಡಾಕ್ಟರ್, ಇದು ಮಿದುಳಿನ ಕ್ಯಾನ್ಸರ್ ಇರಬಹುದು ಎಂದು ಅನುಮಾನಿಸಿ, ಎಂಆರ್ಐ ಸ್ಕ್ಯಾನ್ ಮಾಡಿಸುವಂತೆ ಹೇಳಿದರು. ಅಂತೆಯೇ, ರಿಪೋರ್ಟ್ ನೋಡಿದ ವೈದ್ಯರಿಗೆ, ಅಸಲಿಗೆ ಆತನ ಮಿದುಳಿನಲ್ಲಿ ಕ್ಯಾನ್ಸರ್ ಗಡ್ಡೆ ಬದಲಿಗೆ ಹುಳುಗಳಿರುವುದು ಸ್ಪಷ್ಟವಾಯಿತು.