ವಾಸ್ತವವಾಗಿ, ಪಾಕಿಸ್ತಾನದ ಸೇನೆಯು ಇತ್ತೀಚೆಗೆ ಅಫ್ಘಾನಿಸ್ತಾನದ ಗಡಿಯೊಳಗಿನ ನಾಗರಿಕ ವಸಾಹತುಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಇಸ್ಲಾಮಾಬಾದ್ ಉಗ್ರರ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿರುವುದಾಗಿ ಹೇಳಿಕೊಂಡಿತ್ತಾದರೂ, ಅಫ್ಘಾನ್ ಸರ್ಕಾರ ಮಾತ್ರ ಪಾಕ್ ದಾಳಿಗೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಅಮಾಯಕ ನಾಗರಿಕರು ಬಲಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿತ್ತು. ಇದರ ಬೆನ್ನಲ್ಲೇ ಈಗ ತಾಲಿಬಾನ್ ಪಡೆಗಳು ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಪ್ರತೀಕಾರ ತೀರಿಸಿಕೊಂಡಿವೆ.