ಏಪ್ರಿಲ್ 3, 2024 ರಂದು ತೈವಾನ್‌ನ ಹುವಾಲಿಯನ್ ಪ್ರದೇಶದಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದು ಕಳೆದ 25 ವರ್ಷಗಳಲ್ಲಿ ಅತ್ಯಂತ ಶಕ್ತಿಶಾಲಿ ಭೂಕಂಪವಾಗಿತ್ತು. ಭೂಕಂಪದಿಂದ 19 ಜನರು ಸಾವನ್ನಪ್ಪಿದು, 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಭೂಕಂಪದಿಂದಾಗಿ ಅನೇಕ ಕಟ್ಟಡಗಳು ಓರೆಯಾದವು ಇನ್ನು ಕೆಲವು ಕಟ್ಟಡಗಳು ಕುಸಿದು ಬಿದ್ದಿದ್ದವು. ಸೆಪ್ಟೆಂಬರ್ 21, 1999 ರಂದು ಸಂಭವಿಸಿದ ಚಿ-ಚಿ ಭೂಕಂಪದ ನಂತರದ ಅತ್ಯಂತ ದೊಡ್ಡ ಭೂಕಂಪ ಇದಾಗಿದ್ದು, 1999 ರ ಭೂಕಂಪವು 7.7 ತೀವ್ರತೆಯನ್ನು ಹೊಂದಿದ್ದು, 2,400 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತು ಮತ್ತು ವ್ಯಾಪಕ ವಿನಾಶಕ್ಕೆ ಕಾರಣವಾಗಿತ್ತು.