ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ಆಲ್‌ರೌಂಡರ್ ಮಾರ್ಕೊ ಜಾನ್ಸೆನ್, ಕಿವೀಸ್ ಬೌಲರ್‌ಗಳ ಮೇಲೆ ಪ್ರತಿಧಾಳಿ ನಡೆಸಿದರು. ಕೇವಲ 28 ಎಸೆತಗಳಲ್ಲಿ ಭರ್ಜರಿ 50 ರನ್ ಸಿಡಿಸಿದ ಜಾನ್ಸೆನ್, ತಮ್ಮ ಇನ್ನಿಂಗ್ಸ್‌ನಲ್ಲಿ 4 ಬೃಹತ್ ಸಿಕ್ಸರ್ ಮತ್ತು 3 ಬೌಂಡರಿಗಳನ್ನು ಒಳಗೊಂಡಿದ್ದರು. ಜಾನ್ಸೆನ್ ಅವರ ಈ 'ಸೂಪರ್ 50' ನೆರವಿನಿಂದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿತು.