ಅಮೇರಿಕಾದ ಪಡೆಗಳ ಮೇಲೆ ದಾಳಿ ಮಾಡಿದ್ದ 5 ಐಸಿಸ್​ ಶಂಕಿತರನ್ನು ಬಂಧಿಸಿದ ಸಿರಿಯಾ | Syria

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ಮತ್ತು ಸಿರಿಯನ್ ಸೈನಿಕರ ಮೇಲೆ ದಾಳಿ ಮಾಡಿದ್ದ 5 ಶಂಕಿತರ ವಶ
  • ಇಬ್ಬರು ಅಮೆರಿಕನ್ ಸೈನಿಕರು ಮತ್ತು ಭಾಷಾಂತರಕಾರ ಮರಣ ಹೊಂದಿದ್ದರು
Syria : ಶನಿವಾರ ಮಧ್ಯ ಸಿರಿಯಾ (Syria) ದ ಪಾಲ್ಮಿರಾ ಪಟ್ಟಣದಲ್ಲಿ ಅಮೆರಿಕ ಮತ್ತು ಸಿರಿಯನ್ ಸೈನಿಕರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಐದು ಶಂಕಿತರನ್ನು ಸಿರಿಯಾ ಬಂಧಿಸಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ಅಮೆರಿಕ ಮತ್ತು ಸಿರಿಯನ್ ಪಡೆಗಳ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿಕೋರನೊಬ್ಬ ಗುಂಡು ಹಾರಿಸಿ ಕೊಲ್ಲಲ್ಪಟ್ಟಿದ್ದು, ಇಬ್ಬರು ಅಮೆರಿಕ ಸೇನಾ ಸೈನಿಕರು ಮತ್ತು ನಾಗರಿಕ ಭಾಷಾಂತರಕಾರರನ್ನು ಹತ್ಯೆ ಮಾಡಲಾಗಿದೆ. ಸಿರಿಯನ್ ಆಂತರಿಕ ಸಚಿವಾಲಯವು ದಾಳಿಕೋರನನ್ನು ಇಸ್ಲಾಮಿಕ್ ಸ್ಟೇಟ್ ಜೊತೆ ಸಹಾನುಭೂತಿ ಹೊಂದಿರುವ ಶಂಕಿತ ಸಿರಿಯನ್ ಭದ್ರತಾ ಪಡೆಗಳ ಸದಸ್ಯ ಎಂದು ಹೇಳಿದೆ.
ಸಿರಿಯಾ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಅಮೆರಿಕ ನೇತೃತ್ವದ ಒಕ್ಕೂಟದೊಂದಿಗೆ ಸಹಕರಿಸುತ್ತಿದ್ದು, ಕಳೆದ ತಿಂಗಳು ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರು ಶ್ವೇತಭವನಕ್ಕೆ ಭೇಟಿ ನೀಡಿದಾಗ ಒಪ್ಪಂದವಾಗಿದೆ ಎಂಬ ಮಾಹಿತಿಯಿದೆ.
ಸಿರಿಯಾದ ಆಂತರಿಕ ಸಚಿವಾಲಯವು ಪಾಲ್ಮಿರಾದಲ್ಲಿರುವ ತನ್ನ ಘಟಕಗಳು ಅಂತರರಾಷ್ಟ್ರೀಯ ಒಕ್ಕೂಟ ಪಡೆಗಳ ಸಮನ್ವಯದೊಂದಿಗೆ ಕಾರ್ಯಾಚರಣೆಯನ್ನು ನಡೆಸಿವೆ ಎಂದು ಹೇಳಿದೆ, ಇದರ ಪರಿಣಾಮವಾಗಿ ಐದು ಶಂಕಿತರನ್ನು ತಕ್ಷಣವೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದೆ. 2014 ರಿಂದ 2019 ರವರೆಗೆ ಸಿರಿಯಾ ಮತ್ತು ಇರಾಕ್‌ನ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಹೋರಾಡಲು ದಶಕದಿಂದ ನಡೆಸುತ್ತಿರುವ ಪ್ರಯತ್ನದ ಭಾಗವಾಗಿ ಅಮೆರಿಕವು ಈಶಾನ್ಯ ಸಿರಿಯಾದಲ್ಲಿ ಪಡೆಗಳನ್ನು ನಿಯೋಜಿಸಿದೆ. 13 ವರ್ಷಗಳ ಅಂತರ್ಯುದ್ಧದ ನಂತರ, ಕಳೆದ ವರ್ಷ ನಾಯಕ ಬಶರ್ ಅಲ್-ಅಸ್ಸಾದ್ ಅವರನ್ನು ಪದಚ್ಯುತಗೊಳಿಸಿದ ಮಾಜಿ ಬಂಡುಕೋರರು ಈಗ ಸಿರಿಯಾ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ.(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net