ಗಡಿಗೆ ಬೇಲಿ ಹಾಕಲು ಸಜ್ಜಾದ ಸುವೇಂದು: ನಾವು ಮುಳ್ಳುತಂತಿಗೆ ಹೆದರಲ್ಲ; ಬಾಂಗ್ಲಾ ವಿದೇಶಾಂಗ ಇಲಾಖೆ ಕೌಂಟರ್​! Indo Bangla Border

ಬಾಂಗ್ಲಾ ಗಡಿಗೆ ಬೇಲಿ ಹಾಕಲು ಮುಂದಾದ ಸಿಎಂ ಸುವೇಂದು
ಬಾಂಗ್ಲಾ ಗಡಿಗೆ ಬೇಲಿ ಹಾಕಲು ಮುಂದಾದ ಸಿಎಂ ಸುವೇಂದು
Published on

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾ ಗಡಿಗೆ ಬೇಲಿ ಹಾಕಲು ಮುಂದಾದ ಸಿಎಂ ಸುವೇಂದು
  • ಮುಳ್ಳಿನ ತಂತಿಗಳಿಗೆ ನಾವು ಹೆದರಲ್ಲ ಎಂದ ಬಾಂಗ್ಲಾದೇಶ
  • ಭಾರತ ಮಾನವೀಯತೆ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲ್ಲಿ ಎಂದ ಹುಮಾಯೂನ್​ ಕಬೀರ್​
ಢಾಕಾ: ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದ ಭಾರತೀಯ ಜನತಾ ಪಕ್ಷ, ರಾಜ್ಯದಲ್ಲಿ ಸರ್ಕಾರವನ್ನು ರಚಿಸಿದ್ದು, ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.
ಅಧಿಕಾರ ಸ್ವೀಕರಿಸಿ ನಡೆಸಿದ ಮೊದಲ ಕ್ಯಾಬಿನೆಟ್​ ಮೀಟಿಂಗ್​ನಲ್ಲಿ ಸವೇಂದು, ಮುಂದಿನ 45 ದಿನಗಳಲ್ಲಿ ಬಾಂಗ್ಲಾ ಗಡಿಗೆ (Indo Bangla Border) ಬೇಲಿ ನಿರ್ಮಿಸಲು ಬೇಕಾಗಿರುವ ಭೂಮಿಯನ್ನು ಬಿಎಸ್​ಎಫ್​ಗೆ ನೀಡುತ್ತೇವೆ, ನುಸುಳು ಕೋರರನ್ನು ತಡೆಯುವುದೇ ನಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

ನಾವು ಮುಳ್ಳುತಂತಿಗಳಿಗೆ ಹೆದರುವುದಿಲ್ಲ: ಬಾಂಗ್ಲಾದೇಶ

ಸುವೇಂದು ಅಧಿಕಾರಿ ತೆಗೆದು ಕೊಂಡಿರುವ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶ, ನಾವು ಮುಳ್ಳುತಂತಿಗಳಿಗೆ ಹೆದರುವುದಿಲ್ಲ, ಭಾರತವು ಮಾನವೀಯತೆ ಆಧಾರದಲ್ಲಿ ನಿರ್ಧಾರವನ್ನು ಕೈಗೊಳ್ಳಲಿ ಎಂದು ಕೇಳಿಕೊಳ್ಳತ್ತೆವೆ ಎಂದಿದೆ.
ವರದಿಗಾರರೊಂದಿಗೆ ಮಾತನಾಡಿದ, ಬಾಂಗ್ಲಾ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಎಂ. ಹುಮಾಯೂನ್ ಕಬೀರ್, ದೇಶದ ಭದ್ರತೆಗಾಗಿ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ, ನಾವು ಈ ಕುರಿತು ಅವರೊಂದಿಗೆ ಮಾತುಕತೆ ನಡೆಸಲಿದ್ದೆವೆ ಎಂದು ಹೇಳಿದರು.

ನಾವು ಕಾದು ನೋಡುತ್ತೇವೆ!

ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಹುಮಾಯೂನ್​, ನಾವು ಅವರ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ನಮ್ಮ ಮಾತುಕತೆ ಏನಿದ್ದರು ಕೇವಲ ಕೇಂದ್ರ ಸರ್ಕಾರದ ಜೊತೆ ಎಂದು ಹೇಳಿದ್ದಾರೆ.
ಹಾಗೆಯೇ ಸುವೇಂದು ಅವರ ಮಾತು ಕೇವಲ ಚುನಾವಣಾ ಪ್ರಚಾರಕ್ಕಾಗಿ ಹೇಳಿದ ಮಾತೋ, ಅಥವಾ ನಿಜವಾಗಿಯೂ ಕಾರ್ಯರೂಪಕ್ಕೆ ಬರುತ್ತದೆಯೋ ಎನ್ನುವುದನ್ನು ಬಾಂಗ್ಲಾದೇಶ ನೋಡುತ್ತದೆ ಎಂದು ಅವರು ಹೇಳಿದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net