ಪಂದ್ಯಕ್ಕೂ ಮುನ್ನವೇ ಹಸ್ತಲಾಘವದ ಕುರಿತು ಕೇಳಲಾದ ಪ್ರಶ್ನೆಗೆ ಸೂರ್ಯಕುಮಾರ್ ಕುತೂಹಲಕಾರಿ ಉತ್ತರ ನೀಡಿದ್ದರು. ನೀವು ಮುಂದಿನ 24 ಗಂಟೆಗಳಲ್ಲಿ ಏನು ನಡೆಯಲಿದೆ ಎಂಬುದನ್ನು ನೋಡಿ. ಚೆನ್ನಾಗಿ ಊಟ ಮಾಡಿ, ನೆಮ್ಮದಿಯಾಗಿ ನಿದ್ದೆ ಮಾಡಿ, ನಾಳೆ ಎಲ್ಲವೂ ತಿಳಿಯಲಿದೆ ಎಂದು ತುಂಟತನದ ನಗು ಬೀರಿದ್ದರು. ಅದರಂತೆಯೇ ಮೈದಾನದಲ್ಲಿ ಪಾಕ್ ನಾಯಕನಿಗೆ ಕೈ ಕೊಡದೆ ತಮ್ಮ ನಿರ್ಧಾರವನ್ನು ಜಗತ್ತಿಗೆ ಸಾರಿದ್ದಾರೆ.