ಬೇಗನೇ ಶರಣಾಗಿ, ಇಲ್ಲದಿದ್ರೆ ನಿಮ್ಮ ಬಳಿ ಏನೂ ಇರಲ್ಲ; ನಕ್ಷೆ ಬಿಡುಗಡೆ ಮಾಡಿ ಇರಾನ್ಗೆ ಟ್ರಂಪ್ ಮತ್ತೆ ಎಚ್ಚರಿಕೆ | Donald Trump
ಡೊನಾಲ್ಡ್ ಟ್ರಂಪ್
Published on:
Copied
Follow Us
ವಾಷಿಂಗ್ಟನ್: ಅಮೆರಿಕ ಇರಾನ್ ಮೇಲೆ ಮತ್ತೆ ದಾಳಿ ಪುನರಾರಂಭಿಸಬಹದು ಎಂಬ ವರದಿಗಳ ನಡುವೆ, ಬೇಗನೇ ರಾಜಿ ಮಾಡಿಕೊಳ್ಳಿ, ಇಲ್ಲದಿದ್ರೆ ನಿಮ್ಮ ಬಳಿ ಏನೂ ಇರಲ್ಲ ಎಂದು ಇರಾನ್ ಸುತ್ತಲಿನಿಂದ ದಾಳಿ ಮಾಡುವ ನಕ್ಷೆ ಬಿಡುಗಡೆ ಮಾಡಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಸರಣಿ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಕುರಿತು ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಟ್ರಂಪ್, ಇರಾನ್ ರಾಜಿ ಮಾಡಿಕೊಳ್ಳಲು ಹೆಚ್ಚು ಸಮಯವಿಲ್ಲ. ಆತುರಪಡದಿದ್ದರೆ ಅಂತಿಮವಾಗಿ ಅವರ ಬಳಿ ಏನೂ ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ಮತ್ತು ಎಲ್ಲಾ ಕಡೆಯಿಂದ ಇರಾನ್ ಮೇಲೆ ದಾಳಿಗಳನ್ನು ನಡೆಸಲಾಗುವುದು ಎಂದು ತೋರಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಕದನ ವಿರಾಮಕ್ಕೆ ಅಮೆರಿಕ ಹಲವು ಷರತ್ತು ವಿಧಿಸಿದ್ದು, ಇರಾನ್ 400 ಕಿಲೋಗ್ರಾಂಗಳಷ್ಟು ಪುಷ್ಟೀಕರಿಸಿದ ಯುರೇನಿಯಂ ಅನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಿದೆ. ಜೊತೆಗೆ ದೇಶವು ಕೇವಲ ಒಂದು ಪರಮಾಣು ರಿಯಾಕ್ಟರ್ ಅನ್ನು ಸಕ್ರಿಯವಾಗಿಡಬೇಕು ಮತ್ತು ಯುದ್ಧ ಪರಿಹಾರವನ್ನು ಪಡೆಯಬಾರದು ಎಂದು ಷರತ್ತು ಹಾಕಿದೆ.
ಇದಕ್ಕೆ ಪ್ರತಿಯಾಗಿ ಮಾತುಕತೆಗಳನ್ನು ಪುನರಾರಂಭಿಸಲು ಇರಾನ್ ಹಲವಾರು ಷರತ್ತುಗಳನ್ನು ವಿಧಿಸಿದೆ. ಲೆಬನಾನ್ ಸೇರಿದಂತೆ ಕೊಲ್ಲಿಯಲ್ಲಿ ಎಲ್ಲೆಡೆ ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಅದು ಒತ್ತಾಯಿಸಿದೆ. ಹಾರ್ಮುಜ್ ಜಲಸಂಧಿಯ ಮೇಲಿನ ತನ್ನ ಸಾರ್ವಭೌಮತ್ವವನ್ನು ಗುರುತಿಸಬೇಕು. ವಿದೇಶದಲ್ಲಿರುವ ತನ್ನ ಆಸ್ತಿಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು. ಹಾಗೂ ಯುದ್ಧದಲ್ಲಿ ಅನುಭವಿಸಿದ ನಷ್ಟ ಪರಿಹಾರವನ್ನು ಪಾವತಿಸುವಂತೆ ಬೇಡಿಕೆ ಇಟ್ಟಿದೆ (ಏಜೆನ್ಸೀಸ್).