ಬಳಿಕ ಉಗ್ರರು ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಚೆಕ್ ಪೋಸ್ಟ್‌ನ ಪರಿಧಿಯ ಗೋಡೆಗೆ ಡಿಕ್ಕಿ ಹೊಡೆಸಿದ ಪರಿಣಾಮ ಸ್ಪೋಟ ಸಂಭವಿಸಿತು. ಸ್ಫೋಟದ ಪರಿಣಾಮದಿಂದಾಗಿ, ಚೆಕ್ ಪೋಸ್ಟ್‌ನಲ್ಲಿನ ಮೂಲಸೌಕರ್ಯಕ್ಕೆ ಭಾರಿ ಹಾನಿಯಾಗಿದ್ದು, ಪರಿಣಾಮವಾಗಿ 12 ಮಿಲಿಟರಿ ಸಿಬ್ಬಂದಿ, ಇಬ್ಬರು ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿ ಹುತಾತ್ಮರಾಗಿದ್ದಾರೆ ಎಂದಿದೆ.