ದಕ್ಷಿಣ ಜಪಾನ್ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ, ಕರಾವಳಿ ಪ್ರದೇಶದ ನಿವಾಸಿಗಳಿಗೆ ಸ್ಥಳಾಂತರಕ್ಕೆ ಮನವಿ..Southern Japan
Strong 7.1-Magnitude Earthquake Hits Southern Japan
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕ್ಯುಶುವಿನ ಕುಮಾಮೊಟೊ ಪ್ರಾಂತ್ಯದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ.
ಸುನಾಮಿ ಸಂಭವಿಸುವ ಎಚ್ಚರಿಕೆ ಕೊಟ್ಟ ಜಪಾನ್ ಹವಾಮಾನ ಸಂಸ್ಥೆ.
ಕರಾವಳಿ ತೀರದಲ್ಲಿ ವಾಸವಾಗಿರುವ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಮನವಿ.
ಟೋಕಿಯೋ: ಜಪಾನ್‌ನ ದಕ್ಷಿಣ ಮುಖ್ಯ ದ್ವೀಪವಾದ ಕ್ಯುಶುವಿನ ಕುಮಾಮೊಟೊ ಪ್ರಾಂತ್ಯದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಭೂಮಿಯ ಮೇಲ್ಮೈನಿಂದ 10 ಕಿಲೋಮೀಟರ್ ಆಳದಲ್ಲಿದೆ ಎಂದು ಜಪಾನ್ ಹವಾಮಾನ ಸಂಸ್ಥೆ (Japan Meteorological Agency) ಮಾಹಿತಿ ಹಂಚಿಕೊಂಡಿದೆ.
ಭೂಕಂಪ ತೀವ್ರತೆ ಬೆನ್ನಲ್ಲೇ ಜಪಾನ್ ಹವಾಮಾನ ಸಂಸ್ಥೆ ಸುನಾಮಿ(tsunami Alert) ಎಚ್ಚರಿಕೆ ನೀಡಿದೆ. ಒಂದು ಮೀಟರ್ 3.28 ಅಡಿ ಎತ್ತರವರೆಗೂ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದ್ದು, ಸುರಕ್ಷತಾ ಮಾರ್ಗಸೂಚಿ ಪಾಲನೆ ಮಾಡುವಂತೆ ಕರಾವಳಿ ಪ್ರದೇಶದ ನಿವಾಸಿಗಳಿಗೆ ಮನವಿ ಮಾಡಿಕೊಂಡಿದೆ.
ಸ್ಥಳಾಂತರಕ್ಕೆ ಮನವಿ
ಅಲ್ಲದೇ ಕರಾವಳಿ ತೀರ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರು ಕೂಡಲೇ ಸುರಕ್ಷಿತಾ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಮನವಿ ಮಾಡಿಕೊಂಡಿದೆ. ಸ್ಥಳೀಯ ಆಡಳಿತ ಅಧಿಕಾರಿಗಳು ಹೊರಡಿಸಿರುವ ಸ್ಥಳಾಂತರ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಎನ್ಎಚ್ಕೆ ಹೇಳಿದೆ.
ಕಮಮೊಟೊ, ನಾಗಸಾಕಿ, ಕಾಗೋಶಿಮಾ, ಫುಕುವೋಕಾ, ಸಾಗಾ ಹಾಗೂ ಓಯಿಟಾ, ಮಿಯಾಝಾಕಿ ಸೇರಿದಂತೆ ಒಟ್ಟು 7 ಪ್ರಾಂತ್ಯಕ್ಕೆ ಜಪಾನ್ ಸರ್ಕಾರವು ತುರ್ತು ಭೂಕಂಪನ ಎಚ್ಚರಿಕೆ ಜಾರಿ ಮಾಡಿದೆ. ಅಲ್ಲದೆ ಆಯಾ ಭಾಗದ ಆಡಳಿತಾಧಿಕಾರಿಗಳು ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸೂಚನೆ ಹೊರಡಿಸಿದೆ.
ಜೂನ್ನಲ್ಲಿಯೂ ಸಂಭವಿಸಿತ್ತು ಭೂಕಂಪನ
ಜೂನ್ 25ರಂದು ಉತ್ತರ ಜಪಾನ್ನಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿತ್ತು. ಆದರೆ, ಯಾವುದೇ ಸಾವು-ನೋವು ಸಂಭವಿಸಿದ ಅಥವಾ ಆಸ್ತಿ-ಪಾಸ್ತಿ ನಾಶವಾಗಿರುವ ಬಗ್ಗೆ ವರದಿಯಾಗಿಲ್ಲ. ಪೆಸಿಫಿಕ್ "ರಿಂಗ್ ಆಫ್ ಫೈರ್" ಪಶ್ಚಿಮ ಅಂಚಿನಲ್ಲಿರುವ ಜಪಾನ್ ವಿಶ್ವದ ಅತ್ಯಂತ ಭೂಕಂಪನಶೀಲ ದೇಶದಲ್ಲಿ ಒಂದು.
2011ರಲ್ಲಿ ಭೀಕರ ಭೂಕಂಪ
ಸುಮಾರು 125 ಮಿಲಿಯನ್ ಜನರಿಗೆ ನೆಲೆಕೊಟ್ಟಿರುವ ಈ ದೇಶ ಪ್ರತಿ ವರ್ಷ ನೂರಾರು ಬಾರಿ ಭೂಕಂಪನಕ್ಕೆ ಒಳಗಾಗುತ್ತದೆ. 2011ರಲ್ಲಿ ಉತ್ತರದ ಜಪಾನ್ನಲ್ಲಿ 7.7 ತೀವ್ರತೆ ಭೂಕಂಪ ಸಂಭಿಸಿದ ಪರಿಣಾಮ 18 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಹಲವಾರು ಜನರು ಕಾಣೆಯಾಗಿದ್ದರು.
2011 ಏಪ್ರಿಲ್ 20ರಂದು ಜಪಾನ್‌ನ ಉತ್ತರ ಭಾಗದಲ್ಲಿ 7.7 ತೀವ್ರತೆಯ ಭೂಕಂಪ ಸಂಭಿಸಿದ ಪರಿಣಾಮ 10 ಜನರು ಗಂಭೀರ ಗಾಯಗೊಂಡಿದ್ದರು. ಟೋಕಿಯೊದಲ್ಲಿ ಕಟ್ಟಡಗಳು ಅಲುಗಾಡಿದ್ದರಿಂದ ಅಲ್ಲಿನ ಜನರು ಅಘಾತಕ್ಕೆ ಒಳಗಾಗಿದ್ದರು. ಆ ಹಿನ್ನೆಲೆ ಮತ್ತೆ 8.0 ತೀವ್ರತೆಯ ಭೂಕಂಪ ಸಂಭವಿಸು ಸಾಧ್ಯತೆ ಇದೆ ಎಂದು ಅಲರ್ಟ್ ಘೋಷಿಸಲಾಗಿತ್ತು. ತದನಂತರ ಯಾವುದೇ ಬದಲಾವಣೆ ಕಾಣದ ಸಲುವಾಗಿ ಎಚ್ಚರಿಕೆಯನ್ನು ಒಂದು ವಾರದ ಬಳಿಕ ವಾಪಸ್ ಪಡೆದುಕೊಳ್ಳಲಾಯ್ತು, (ಏಜೆನ್ಸೀಸ್).