ಅಮೆರಿಕದ ವಾಯುಪಡೆಗೆ ಇಷ್ಟೆಲ್ಲಾ ನಷ್ಟಗಳಾಗುತ್ತಿದ್ದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ತಮ್ಮ ಆಕ್ರಮಣಕಾರಿ ನಿಲುವನ್ನು ಬದಲಿಸಿಲ್ಲ. ಇನ್ನೊಂದು ಎರಡು-ಮೂರು ವಾರಗಳಲ್ಲಿ ನಾವು ಇರಾನ್ ಅನ್ನು ಶಿಲಾಯುಗಕ್ಕೆ ಕಳುಹಿಸುತ್ತೇವೆ, ಅವರು ಇರಬೇಕಾದ ಜಾಗ ಅದೇ ಎಂದು ಟ್ರಂಪ್ ಘೋಷಿಸಿದ್ದಾರೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.