ಹಿಮದ ಆರ್ಭಟ: ಅಮೆರಿಕ ಈಶಾನ್ಯದಲ್ಲಿ ಸಾವಿರಾರು ವಿಮಾನಗಳ ರದ್ದು, ಪ್ರಯಾಣಿಕರು ತತ್ತರ! Snow storm

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ವಾಷಿಂಗ್ಟನ್: ಅಮೆರಿಕದ ಈಶಾನ್ಯ ಪ್ರದೇಶದಲ್ಲಿ ಭಾರೀ ಹಿಮಪಾತದಿಂದಾಗಿ (Snow storm) ಶನಿವಾರ (ಡಿ.27) ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಇದು ಕ್ರಿಸ್​ಮಸ್ ನಂತರ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರನ್ನು ಸಂಕಷ್ಟಕ್ಕೀಡು ಮಾಡಿದೆ.
ನ್ಯೂಯಾರ್ಕ್, ನ್ಯೂಜೆರ್ಸಿ, ಕನೆಕ್ಟಿಕಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಮುಂಜಾನೆ ಭಾರೀ ಹಿಮಪಾತವಾಗಿದೆ  ಎಂದು ರಾಷ್ಟ್ರೀಯ ಹವಾಮಾನ ಸೇವೆ ವರದಿ ಮಾಡಿದ್ದು, ಅಪಾಯಕಾರಿ ಪರಿಸ್ಥಿತಿಗಳಿಂದಾಗಿ ಜನರು ರಸ್ತೆಗಳಿಂದ ದೂರ ಇರಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ನ್ಯೂಯಾರ್ಕ್ ನಿವಾಸಿಗಳ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ಹವಾಮಾನದಲ್ಲಿ ಎಲ್ಲರೂ ತೀವ್ರ ಎಚ್ಚರಿಕೆಯಿಂದ ಇರಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಪ್ರಕಟನೆ ಹೊರಡಿಸಿದ್ದಾರೆ.
ರಾಷ್ಟ್ರೀಯ ಹವಾಮಾನ ಸೇವೆ ಪ್ರಕಾರ,  ಸಿರಾಕ್ಯೂಸ್‌ನಿಂದ ಲಾಂಗ್ ಐಲ್ಯಾಂಡ್‌ವರೆಗೆ ಮಧ್ಯ ನ್ಯೂಯಾರ್ಕ್‌ನಾದ್ಯಂತ 6 ರಿಂದ 10 ಇಂಚುಗಳು ಹಿಮ ಬಿದ್ದಿದೆ. ಹಾಗೂ ನ್ಯೂಯಾರ್ಕ್​ನಲ್ಲಿ 2-4 ಇಂಚಿಗಳಷ್ಟು ಹಿಮ ಹಾಗೂ ಸೆಂಟ್ರಲ್ ಪಾರ್ಕ್‌ನಲ್ಲಿ 4.3 ಇಂಚುಗಳಷ್ಟು ಹಿಮ ಬಿದ್ದಿದ್ದು, ಇದು 2022 ರ ನಂತರದ ಅತ್ಯಧಿಕ ಹಿಮದ ಪ್ರಮಾಣವಾಗಿದೆ ಎಂದು ತಿಳಿದುಬಂದಿದೆ.

ವಿಮಾನ ಸಂಚಾರದ ಮೇಲೆ ತೀವ್ರ ಪರಿಣಾಮ!

ನಗರದಲ್ಲಿ ಹಿಮಪಾತ ಕಡಿಮೆಯಾದರೂ, ಅದಿನ್ನೂ ಪ್ರಯಾಣಿಕರ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ಸುಮಾರು 14,400 ಕ್ಕೂ ಹೆಚ್ಚು ದೇಶೀಯ ವಿಮಾನಗಳು ರದ್ದಾಗಿವೆ ಎಂದು ವರದಿಯಾಗಿದೆ.
ಅಮೆರಿಕಕ್ಕೆ ಮತ್ತು ಅಲ್ಲಿಂದ ಹೊರಡುವ ಸುಮಾರು 2,100 ಅಂತರರಾಷ್ಟ್ರೀಯ ವಿಮಾನಗಳು ರದ್ದಾದ ಹಿನ್ನಲೆ ಪ್ರಯಾಣವನ್ನು ಬದಲಾವಣೆ ಶುಲ್ಕವನ್ನು ಮನ್ನಾ ಮಾಡುವ ಮೂಲಕ ಅಮೇರಿಕನ್​ ಏರ್ಲೈನ್ಸ್, ಯುನೈಟೆಡ್ ಏರ್ಲೈನ್ಸ್ ಮತ್ತು ಜೆಟ್ಬ್ಲೂ ಏರ್ವೇಸ್ ಪ್ರಯಾಣಿಕರಿಗೆ ಪರಿಹಾರ ನೀಡಿದೆ.

ರಸ್ತೆ ಸಂಚಾರಕ್ಕೂ ತೊಂದರೆಯಾದ ಹಿಮಪಾತ

ಪೆನ್ಸಿಲ್ವೇನಿಯಾ ಮತ್ತು ಮ್ಯಾಸಚೂಸೆಟ್ಸ್‌ನ ಹೆಚ್ಚಿನ ಭಾಗಗಳಿಗೆ ಗಾಳಿ ಎಚ್ಚರಿಕೆಗಳು ಮತ್ತು ಚಳಿಗಾಲದ ಹವಾಮಾನ ಸಲಹೆಗಳನ್ನು ನೀಡಲಾಗಿದ್ದು, ಅಂತರಾಜ್ಯ ಹೆದ್ದಾರಿಗಳಲ್ಲಿ ವಾಣಿಜ್ಯ ವಿಮಾನಗಳ ಮೇಲೆ ನಿರ್ಬಂಧ ಹೇರಲಾಗಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net