ವಾಷಿಂಗ್ಟನ್: ಜಗತ್ತು ಕುತೂಹಲದಿಂದ ಕಾಯುತ್ತಿರುವ ನಾಸಾದ ದಶಕಗಳ ನಂತರದ ಮೊದಲ ಮಾನವಸಹಿತ ಚಂದ್ರಯಾನ 'ಆರ್ಟೆಮಿಸ್ II' ಉಡಾವಣೆಗೆ ಕೇವಲ ಕೆಲವೇ ದಿನಗಳು ಬಾಕಿ ಇರುವಾಗ, ಎಲೋನ್ ಮಾಸ್ಕ್ ಒಡೆತನದ ಸ್ಪೇಸ್‌ಎಕ್ಸ್ (SpaceX) ಕಂಪನಿಯ ಸ್ಟಾರ್‌ಲಿಂಕ್(Starlink Dark) ಉಪಗ್ರಹವೊಂದು ಬಾಹ್ಯಾಕಾಶದಲ್ಲಿ ಹಠಾತ್ ಸ್ಥಗಿತಗೊಂಡಿದೆ. ಭೂಮಿಯಿಂದ ಸುಮಾರು 560 ಕಿ.ಮೀ ಎತ್ತರದಲ್ಲಿ ಈ ಘಟನೆ ನಡೆದಿದ್ದು, ವಿಜ್ಞಾನಿಗಳಲ್ಲಿ ಆತಂಕ ಮೂಡಿಸಿತ್ತು.