ಇನ್​ಸ್ಟಾಗ್ರಾಮ್​, ಫೇಸ್​ಬುಕ್​... ಡಿ.10ರಿಂದ ಈ ದೇಶದಲ್ಲಿ ಸೋಷಿಯಲ್ ಮೀಡಿಯಾ​ ಸಂಪೂರ್ಣ ಬ್ಯಾನ್​!

ಸೋಷಿಯಲ್ ಮೀಡಿಯಾ ಬ್ಯಾನ್​
ಸೋಷಿಯಲ್ ಮೀಡಿಯಾ ಬ್ಯಾನ್​
Published on

ಪ್ರಮುಖ ಮುಖ್ಯಾಂಶಗಳು

  • ಡಿ.10ರಿಂದ ತನ್ನ ರಾಷ್ಟ್ರದಲ್ಲಿ ಸೋಷಿಯಲ್​ ಮೀಡಿಯಾ ಬ್ಯಾನ್​
  • ಇನ್​ಸ್ಟಾಗ್ರಾಮ್​, ಫೇಸ್​ಬುಕ್​ ಸೇರಿ ಇತರ ಸೋಷಿಯಲ್​ ಮೀಡಿಯಾ ಸೈಟ್‌
  • 16 ವರ್ಷ ಕೆಳಗಿರುವ ಮಕ್ಕಳಿಗೆ ಈ ನಿಷೇಧ
ನವದೆಹಲಿ: ಸೋಷಿಯಲ್ ಮೀಡಿಯಾ ಇಲ್ಲದ ದಿನವಿದ್ಯಾ? ನಿಜಕ್ಕೂ ಇಲ್ಲ ಬಿಡಿ. ಹೊಟ್ಟೆಗೆ ಹಿಟ್ಟಿಲ್ಲ ಅಂದ್ರು ಮೊಬೈಲ್​ಗೆ ಇಂಟರ್​ನೆಟ್​ ಇರಬೇಕು. ಅಲ್ಲಿ ಸಾಮಾಜಿಕ ಜಾಲತಾಣಗಳ ಆ್ಯಪ್​ಗಳ ಬಳಕೆಯಂತು ಇರಲೇ ಬೇಕು. ಅದರಲ್ಲೂ, ಇದು ಡಿಜಿಟಲ್​ ಯುಗ. ಅಂದಮೇಲೆ ಕೈನಿಂದ ಸ್ಮಾರ್ಟ್​ಫೋನ್​ ದೂರವಾಗುತ್ತಾ ಹೇಳಿ? ಖಂಡಿತ ಇಲ್ಲ. ಯಾಕಂದ್ರೆ, ಆ ಫೋನ್​ನಲ್ಲಿ ನಾವು ಬಳಸುವ ಸೋಷಿಯಲ್ ಮೀಡಿಯಾ ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿದೆ. ಒಂದು ದಿನ ಕೂಡ ಫೇಸ್​ಬುಕ್​, ಇನ್​ಸ್ಟಾಗ್ರಾಮ್​ ಬಿಟ್ಟಿರದ ಜನಕ್ಕೆ ಇದೀಗ ಇನ್ಮುಂದೆ ಅದರ ಬಳಕೆ ನಿಷೇಧ ಎಂದರೆ ಹೇಗೆ?
ಸದ್ಯ ಇಲ್ಲೊಂದು ದೇಶವು ಆ ನಿರ್ಧಾರಕ್ಕೆ ಮುಂದಾಗಿದೆ. ಇದೇ ಡಿಸೆಂಬರ್ 10ರಿಂದ ತನ್ನ ರಾಷ್ಟ್ರದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಿದೆ ಆಸ್ಟ್ರೇಲಿಯಾ. 16 ವರ್ಷ ಕೆಳಗಿರುವ ಮಕ್ಕಳು, ಇನ್​ಸ್ಟಾಗ್ರಾಮ್​, ಫೇಸ್​ಬುಕ್​ ಸೇರಿದಂತೆ ಇತರ ಸೋಷಿಯಲ್​ ಮೀಡಿಯಾ ಸೈಟ್‌ಗಳನ್ನು ಬಳಸುವುದನ್ನು ಬ್ಯಾನ್ ಮಾಡಲಾಗಿದೆ.
ಜೂನ್ 2021ರ ಆಸ್ಟ್ರೇಲಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ವೆಲ್ಫೇರ್ (AIHW) ಡೇಟಾ ಪ್ರಕಾರ, ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳು ಸುಮಾರು 4.04 ಮಿಲಿಯನ್ ಇದ್ದಾರೆ. ಈ ಗುಂಪು ಒಟ್ಟು ಜನಸಂಖ್ಯೆಯ ಸುಮಾರು ಶೇ.16ರಷ್ಟು ಪ್ರತಿನಿಧಿಸುತ್ತದೆ. ಇದರರ್ಥ, ದೇಶದಲ್ಲಿ ಸುಮಾರು ನಾಲ್ಕು ಮಿಲಿಯನ್ ಸಾಮಾಜಿಕ ಜಾಲತಾಣದ ಖಾತೆಗಳು ಇದೀಗ ಸಂಪೂರ್ಣವಾಗಿ ಕ್ಲೋಸ್ ಆಗಲಿವೆ.

ಡಿಸೆಂಬರ್ 10 ರಿಂದ ನಿಷೇಧ ಜಾರಿಗೆ...

ಆಸ್ಟ್ರೇಲಿಯಾದಲ್ಲಿ ಈ ನಿಷೇಧ ಡಿಸೆಂಬರ್ 10ರಿಂದ ಜಾರಿಗೆ ಬರಲಿದೆ. ಅಂದಿನಿಂದ, ದೇಶದಲ್ಲಿ ಹದಿಹರೆಯದವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರಲು ಸಾಧ್ಯವಿಲ್ಲ. ಈ ರೀತಿ ನಿಷೇಧ ಜಾರಿಗೆ ತಂದ​ ವಿಶ್ವದ ಮೊದಲ ದೇಶ ಆಸ್ಟ್ರೇಲಿಯಾ ಆಗಿದೆ. ಈ ಮೂಲಕ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಟಿಕ್‌ಟಾಕ್, ಸ್ನ್ಯಾಪ್‌ಚಾಟ್, ಮೆಟಾ ಸಂಸ್ಥೆಗಳು ಉಲ್ಲೇಖಿಸಲಾದ ವಯಸ್ಸಿನವರಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಥ್ರೆಡ್‌ಗಳ ಬಳಕೆಯನ್ನು ನಿರ್ಬಂಧಿಸಲಿದೆ.

ಕಟ್ಟುನಿಟ್ಟಿನ ನಿಷೇಧಕ್ಕೆ ಕಾರಣವೇನು?

ಡಿಜಿಟಲ್ ಜಗತ್ತು ಮಕ್ಕಳ ಮಾನಸಿಕ ಆರೋಗ್ಯ ಅಥವಾ ಬೆಳವಣಿಗೆಗೆ ಹಾನಿಯಾಗದಂತೆ ನೋಡಿಕೊಳ್ಳಲು ಆಸ್ಟ್ರೇಲಿಯಾ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ ಎಂದು ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ. ಆನ್‌ಲೈನ್ ಸುರಕ್ಷತಾ ತಿದ್ದುಪಡಿ (ಸಾಮಾಜಿಕ ಮಾಧ್ಯಮ ಕನಿಷ್ಠ ವಯಸ್ಸು) ಮಸೂದೆ 2024ರ ಪ್ರಕಾರ, ಅಪ್ರಾಪ್ತ ವಯಸ್ಕರು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟಿಕ್‌ಟಾಕ್, ಸ್ನ್ಯಾಪ್‌ಚಾಟ್, ಯೂಟ್ಯೂಬ್, ಎಕ್ಸ್ (ಹಿಂದಿನ ಟ್ವಿಟರ್), ರೆಡ್ಡಿಟ್, ಥ್ರೆಡ್‌, ಕಿಕ್‌ನಂತಹ ಪ್ರಮುಖ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಖಾತೆಗಳನ್ನು ಕ್ರಿಯೇಟ್​ ಮಾಡಿಕೊಳ್ಳುವುದು ಮತ್ತು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net