ಸಿಡ್ನಿ ಟೆಸ್ಟ್‌ನಲ್ಲಿ ಸ್ಮಿತ್ ಅಬ್ಬರ; ಬ್ರಾಡ್ಮನ್- ದ್ರಾವಿಡ್ ದಾಖಲೆ ಪತನ: ಇತಿಹಾಸ ಬರೆದ ಆಸೀಸ್ ಬ್ಯಾಟರ್ | Steve Smith

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ತಮ್ಮ 37 ಶತಕ ಸಿಡಿಸಿ ಸಂಭ್ರಮಿಸಿದ ಕ್ಷಣ
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ತಮ್ಮ 37 ಶತಕ ಸಿಡಿಸಿ ಸಂಭ್ರಮಿಸಿದ ಕ್ಷಣ
Published on
ಕ್ಯಾನ್​ಬೆರಾ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (SCG) ನಡೆಯುತ್ತಿರುವ ಕೊನೆಯ ಆಶಸ್ ಟೆಸ್ಟ್​ನಲ್ಲಿ​ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್(Steve Smith) ತಮ್ಮ 37 ಶತಕ ಬಾರಿಸಿದ್ದಾರೆ. ಈ ಮೂಲಕ ದಂತಕಥೆಗಳಾದ ಸರ್ ಡಾನ್ ಬ್ರಾಡ್ಮನ್ ಮತ್ತು ಸರ್ ಜ್ಯಾಕ್ ಹಾಬ್ಸ್ ಅವರ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರ

ಪ್ರಸ್ತುತ ಸ್ಮಿತ್ ಈಗ ಇಂಗ್ಲೆಂಡ್ ವಿರುದ್ಧ ಎಲ್ಲಾ ಸ್ವರೂಪಗಳಲ್ಲಿ 5,085 ರನ್ ಗಳಿಸಿದ್ದಾರೆ. ಅಲ್ಲದೆ, ಕ್ರಿಕೆಟ್​ ಲೆಜೆಂಡ್​ ಡಾನ್ ಬ್ರಾಡ್ಮನ್ ಅವರ ದೀರ್ಘಕಾಲದ 5,028 ರನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಒಂದೇ ಎದುರಾಳಿಯ ವಿರುದ್ಧ ಅತಿ ಹೆಚ್ಚು ಅಂತರಾಷ್ಟ್ರೀಯ ರನ್ ಗಳಿಸಿದ ಆಟಗಾರರಲ್ಲಿ ಅವರು ಈಗ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗಿಂತ ಹಿಂದಿದ್ದಾರೆ.

ಆಶಸ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ

ಕೊನೆಯ ಆಶಸ್​ನ ಮೊದಲ ಇನ್ನಿಂಗ್ಸ್​ 84 ರನ್ ಗಳಿಸುವ ಮೂಲಕ, ಸ್ಮಿತ್ ಇಂಗ್ಲೆಂಡ್‌ನ ದಿಗ್ಗಜ ಸರ್ ಜ್ಯಾಕ್ ಹಾಬ್ಸ್ (3,636 ರನ್) ಅವರನ್ನು ಹಿಂದಿಕ್ಕಿ ಆಶಸ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಅವರು ಈಗ ಡಾನ್ ಬ್ರಾಡ್ಮನ್ (5,028 ರನ್) ಗಿಂತ ಮಾತ್ರ ಹಿಂದುಳಿದಿದ್ದಾರೆ.

37ನೇ ಟೆಸ್ಟ್ ಶತಕ

ಈ ಶತಕವು ಅವರು ಟೆಸ್ಟ್ ಶತಕಗಳ ಸಾರ್ವಕಾಲಿಕ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ (36) ಅವರನ್ನು ಹಿಂದಿಕ್ಕಿದ್ದಾರೆ. ಈಗ ಜಾಗತಿಕವಾಗಿ 6 ​​ನೇ ಸ್ಥಾನದಲ್ಲಿದ್ದಾರೆ ಮತ್ತು ಕುಮಾರ್ ಸಂಗಕ್ಕಾರ 38 ಶತಕ ಸಿಡಿಸಿದ್ದಾರೆ.
ಆಶಸ್ ಶತಕಗಳು: ಸ್ಮಿತ್ ಈಗ 13 ಆಶಸ್ ಶತಕಗಳನ್ನು ಗಳಿಸಿದ್ದಾರೆ. ಅದರೆ, ಬ್ರಾಡ್ಮನ್ ಅವರ 19 ಶತಕಗಳ ನಂತರ ಎರಡನೇ ಸ್ಥಾನದಲ್ಲಿದ್ದಾರೆ.

ಆಶಸ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರು

1. ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ): 5,028 ರನ್‌ಗಳು
2. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ): 3,680+ ರನ್‌ಗಳು*
3. ಜ್ಯಾಕ್ ಹಾಬ್ಸ್ (ಇಂಗ್ಲೆಂಡ್): 3,636 ರನ್‌ಗಳು
4. ಅಲನ್ ಬಾರ್ಡರ್ (AUS): 3,222 ರನ್
ಇಂಗ್ಲೆಂಡ್ (ಮೊದಲ ಇನ್ನಿಂಗ್ಸ್): 384 ಆಲ್ ಔಟ್ (ಜೋ ರೂಟ್ 160, ಹ್ಯಾರಿ ಬ್ರೂಕ್ 84; ಮೈಕೆಲ್ ನೆಸರ್ 4/60)
ಆಸ್ಟ್ರೇಲಿಯಾ (ಮೊದಲ ಇನ್ನಿಂಗ್ಸ್): 518/7 (ಟ್ರಾವಿಸ್ ಹೆಡ್ 163, ಸ್ಟೀವ್ ಸ್ಮಿತ್ 129*, ಬ್ಯೂ ವೆಬ್‌ಸ್ಟರ್ 42*; ಬ್ರೈಡನ್ ಕಾರ್ಸ್ 3/96)
ಆಸ್ಟ್ರೇಲಿಯಾ 3 ವಿಕೆಟ್‌ಗಳು ಬಾಕಿ ಇರುವಂತೆಯೇ 134 ರನ್‌ಗಳ ಮುನ್ನಡೆಯಲ್ಲಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net