ಕಾರಣ, ಈ ಹಿಂದೆ ಸ್ಲೋವೆನ್ ರೆಫರಿಯಾಗಿದ್ದ ಪಂದ್ಯದಲ್ಲಿ ಅರ್ಜೆಂಟೀನಾ ಹೀನಾಯ ಸೋಲನ್ನು ಅನುಭವಿಸಿತು. ಈ ವಿಶ್ವಕಪ್‌ನಲ್ಲಿ ಪಂದ್ಯ ಆಯೋಜಕರು ಮತ್ತು ರೆಫರಿಗಳು ಇಲ್ಲಿಯವರೆಗೆ ಅರ್ಜೆಂಟೀನಾ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂಬ ವಾದ, ಆರೋಪಗಳ ಬೆನ್ನಲ್ಲೇ ಫಿಫಾ ಈ ನಿರ್ಧಾರ ತೆಗೆದುಕೊಂಡಿದೆ. ಇದರೊಟ್ಟಿಗೆ ಸಾಕಷ್ಟು ವಿವಾದಗಳಲ್ಲಿ ಸಿಲುಕಿದ್ದ ಸ್ಲೋವೆನ್, ಮೆಸ್ಸಿ ತಂಡದೊಂದಿಗೆ ಹೆಚ್ಚಾಗಿ ಕಿರಿಕಿರಿಯನ್ನೇ ಮಾಡಿಕೊಂಡಿದ್ದಾರೆ. ಇದೊಂದು ರೀತಿ ಶಾಪವಿದ್ದಂತೆ ಎಂಬುದು ಸದ್ಯ ಅರ್ಜೆಂಟೀನಾ ಅಭಿಮಾನಿಗಳ ಮನದ ಮಾತು,(ಏಜೆನ್ಸೀಸ್).