ಇಲ್ಲಿ ಗಂಡಂದಿರನ್ನು ಬಾಡಿಗೆ ಪಡೆಯುತ್ತಾರಂತೆ ಮಹಿಳೆಯರು: ಕಾರಣ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Rent Husbands

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಗಂಡನನ್ನು ಬಾಡಿಗೆ ಪಡೆಯುವ ಒಂದು ವಿಚಿತ್ರ ಟ್ರೆಂಡ್​ ಇದೆ ಅಂದರೆ ನೀವು ನಂಬುತ್ತೀರಾ?
  • ಹೌದು, ಈ ಒಂದು ದೇಶದಲ್ಲಿ ಮಹಿಳೆಯರು ಗಂಡಂದಿರನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ
  • ಬಾಡಿಗೆ ಪಡೆದ ಗಂಡಂದಿರನ್ನು ತಮ್ಮ ಮನೆಕೆಲಸ ಮತ್ತು ಇತರ ಅಗತ್ಯಗಳಿಗಾಗಿ ಬಳಸುತ್ತಿದ್ದಾರೆ
  • ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ಈ ಸ್ಟೋರಿಯನ್ನು ನೀವು ಸಂಪೂರ್ಣ ಓದಬೇಕು
Rent Husbands : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ ಸಂಬಂಧ ಶ್ರೇಷ್ಠವಾದದ್ದು. ಇಬ್ಬರು ಕೂಡಿ ಬಾಳಿದರೆ ಬದುಕೇ ಸ್ವರ್ಗವಾಗುತ್ತದೆ. ಒಬ್ಬ ಪುರುಷನ ಜೀವನದಲ್ಲಿ ಕೊನೆಯವರೆಗೂ ಆತನೊಂದಿಗೆ ಪ್ರಯಾಣಿಸುವ ಏಕೈಕ ಜೀವ ಅಂದರೆ ಅದು ಪತ್ನಿ. ಅದೇ ರೀತಿಯ ಮಹಿಳೆಯ ಜೀವನದಲ್ಲಿ ಕೊನೆಯವರೆಗೂ ಕಾವಲುಗಾರನಾಗಿ ಇರುವ ಜೀವವೆಂದರೆ ಅದು ಗಂಡ. ಹೀಗಿರುವಾಗ ಗಂಡನನ್ನು ಬಾಡಿಗೆ ಪಡೆಯುವ ಒಂದು ವಿಚಿತ್ರ ಟ್ರೆಂಡ್​ ಇದೆ ಅಂದರೆ ನೀವು ನಂಬುತ್ತೀರಾ? ಇದು ಕಲಿಯುಗ ಅಲ್ವಾ ನೀವು ನಂಬಲೇಬೇಕು.
ಹೌದು, ಈ ಒಂದು ದೇಶದಲ್ಲಿ ಮಹಿಳೆಯರು ಗಂಡಂದಿರನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ. ಹೀಗೆ ಪಡೆದ ಗಂಡಂದಿರನ್ನು ತಮ್ಮ ಮನೆಕೆಲಸ ಮತ್ತು ಇತರ ಅಗತ್ಯಗಳಿಗಾಗಿ ಬಳಸುತ್ತಿದ್ದಾರೆ. ಇದಲ್ಲದೆ, ಇಲ್ಲಿ ಗಂಡಂದಿರನ್ನು ಬಾಡಿಗೆಗೆ ನೀಡುವ ಕಂಪನಿಗಳು ಸಹ ಇವೆ. ನೀವು ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ಈ ಸ್ಟೋರಿಯನ್ನು ನೀವು ಸಂಪೂರ್ಣ ಓದಬೇಕು.
ಸಂಪೂರ್ಣ ವಿವರಗಳಿಗೆ ಹೋಗುವುದಾದರೆ, ಯುರೋಪಿನಲ್ಲಿ ಲಾಟ್ವಿಯಾ ಎಂಬ ಒಂದು ದೇಶವಿದೆ. ಇಲ್ಲಿ ಅವಿವಾಹಿತ ಪುರುಷರಿಗೆ ಭಾರೀ ಬೇಡಿಕೆಯಿದೆ. ಇದಕ್ಕೆ ಕಾರಣ ಅಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಇದ್ದಾರೆ. ಇದರ ಪರಿಣಾಮವಾಗಿ, ಅಲ್ಲಿನ ಹುಡುಗಿಯರು ಮದುವೆಯಾಗಲು ಪುರುಷರನ್ನು ಹುಡುಕುವಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಲಾಟ್ವಿಯಾದಲ್ಲಿ ಪುರುಷರಿಗಿಂತ ಶೇ. 25.5 ರಷ್ಟು ಹೆಚ್ಚು ಮಹಿಳೆಯರಿದ್ದಾರೆ. 65 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಮಹಿಳೆಯರಿದ್ದಾರೆ. ಹಾಗಾಗಿ, ಕೆಲಸದ ಸ್ಥಳದಲ್ಲಿ ಮತ್ತು ದೈನಂದಿನ ಜೀವನದಲ್ಲಿ ಪುರುಷರ ಕೊರತೆಗೆ ಕಾರಣವಾಗಿದೆ. ಕೆಲವು ಮಹಿಳೆಯರು ಸಂಗಾತಿಯನ್ನು ಹುಡುಕಲು ವಿದೇಶಗಳಿಗೂ ಹೋಗುತ್ತಿದ್ದಾರೆ.
ಹೊರಗೆ ಹೋಗಲು ಸಾಧ್ಯವಾಗದವರು ಗಂಡಂದಿರನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ. ಅವರು ಗಂಟೆಗಟ್ಟಲೆ ಅಥವಾ ಒಂದ ದಿನಕ್ಕಾಗಿ ಗಂಡಂದಿರನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ ಮತ್ತು ಅವರನ್ನು ಎಲ್ಲ ಸೇವೆಗಳಿಗಾಗಿ ಬಳಸುತ್ತಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ಗಂಡಂದಿರನ್ನು ಪೂರೈಸಲೆಂದೇ ಅನೇಕ ಕಂಪನಿಗಳು ಕೂಡ ಹುಟ್ಟಿಕೊಂಡಿವೆ.
ಕೊಮಂಡಾ24 ನಂತಹ ಕಂಪನಿಗಳು ಗಂಟೆಗಟ್ಟಲೆ ಗಂಡಂದಿರನ್ನು ಬಾಡಿಗೆಗೆ ನೀಡಲು ಮುಂದಾಗಿವೆ. ಅವರು ಪ್ಲಂಬಿಂಗ್, ಮರಗೆಲಸ, ರಿಪೇರಿ ಮತ್ತು ಇತರ ಮನೆಕೆಲಸಗಳಲ್ಲಿ ಸಹಾಯ ಮಾಡುತ್ತಾರೆಂದು ಕಂಪನಿ ಹೇಳಿದೆ. ಮನೆಕೆಲಸ ಮತ್ತು ಇತರ ಕೆಲಸಗಳಲ್ಲಿ ಪರಿಣಿತರಾಗಿರುವ ಗಂಡಂದಿರಿಗೆ ಹೆಚ್ಚಿನ ಬೇಡಿಕೆಯಿದ್ದು, ಬಾಡಿಗೆಗೆ ಪಡೆದ ಗಂಡಂದಿರು ಗಂಟೆಗೆ 44 ಡಾಲರ್​ ಅಥವಾ ದಿನಕ್ಕೆ 280 ಡಾಲರ್​ ಗಳಿಸುತ್ತಾರೆ.
ಅಂದಹಾಗೆ, ಅಲ್ಲಿನ ಜೀವನಶೈಲಿ ಮತ್ತು ಕೆಟ್ಟ ಅಭ್ಯಾಸಗಳಿಂದಾಗಿ ಪುರುಷರ ಜನಸಂಖ್ಯೆ ಕಡಿಮೆಯಾಗಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಇದರಿಂದ ಲಾಟ್ವಿಯಾದಲ್ಲಿ ಲಿಂಗ ಅಸಮತೋಲನ ಉಂಟಾಗಿದೆ. ಲಾಟ್ವಿಯಾದಲ್ಲಿ, ಶೇ. 31 ರಷ್ಟು ಜನರು ಧೂಮಪಾನ ಮಾಡುತ್ತಾರೆ ಮತ್ತು ಹೆಚ್ಚಿನ ಜನರು ಬೊಜ್ಜು ಹೊಂದಿದ್ದಾರೆಂದು ಅಧ್ಯಯನಗಳು ಹೇಳಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net