ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಮೊದಲ ಭೂಕಂಪದ ಕೇಂದ್ರಬಿಂದು ವೆನೆಜುವೆಲಾದ ಕರೀಬಿಯನ್ ಕರಾವಳಿಯ ಮೊರೋನ್ ಪ್ರದೇಶದ ಪಶ್ಚಿಮ ಭಾಗದಲ್ಲಿ ಇತ್ತು. ಇದು ಕಾರಕಾಸ್ನಿಂದ ಸುಮಾರು 168 ಕಿಲೋಮೀಟರ್ ದೂರದಲ್ಲಿದ್ದು, 22 ಕಿಲೋಮೀಟರ್ ಆಳದಲ್ಲಿ ಸಂಭವಿಸಿತು. ಇದರ ಬೆನ್ನಲ್ಲೇ ಕೇವಲ ಒಂದು ನಿಮಿಷದ ಬಳಿಕ 7.5 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತು. ಇದರ ಕೇಂದ್ರಬಿಂದು ಮೊರೋನ್ನ ನೈಋತ್ಯ ಭಾಗದಲ್ಲಿ 16 ಕಿಲೋಮೀಟರ್ ದೂರದಲ್ಲಿದ್ದು, 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಕಳೆದ ನೂರಕ್ಕೂ ಹೆಚ್ಚು ವರ್ಷಗಳಲ್ಲಿ ವೆನೆಜುವೆಲಾದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಇವು ಸೇರಿವೆ ಎಂದು ವರದಿಯಾಗಿದೆ.