ಹೊರ್ಮುಜ್ ಜಲಸಂಧಿಯು ಜಾಗತಿಕ ತೈಲ ಪೂರೈಕೆಯ ಜೀವನಾಡಿಯಾಗಿದೆ. ಅಮೆರಿಕ ಇಲ್ಲಿ ತನ್ನ ಹಿಡಿತ ಸಾಧಿಸಲು ಯತ್ನಿಸುತ್ತಿದ್ದರೆ, ಇರಾನ್ ಇದನ್ನು ತನ್ನ ಅಸ್ತ್ರವನ್ನಾಗಿ ಬಳಸುತ್ತಿದೆ. ಅಮೆರಿಕ ಒಂದು ವೇಳೆ ದಿಗ್ಬಂಧನ ತೆರವುಗೊಳಿಸಲು ಒಪ್ಪದಿದ್ದರೆ, ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವ ಭೀತಿ ಎದುರಾಗಿದೆ. ಇಸ್ಲಾಮಾಬಾದ್‌ನಲ್ಲಿ ಈಗ ಬೀಡುಬಿಟ್ಟಿರುವ ರಾಜತಾಂತ್ರಿಕರು ಇರಾನ್ ಅನ್ನು ಮನವೊಲಿಸಲು ಹರಸಾಹಸ ಪಡುತ್ತಿದ್ದಾರೆ,(ಏಜೆನ್ಸೀಸ್).