ಸಂಪಾದನೆಗೆ ಹೊಸ ಐಡಿಯಾ... ಪಕ್ಕದ ಮನೆಯವರ ರಹಸ್ಯಗಳನ್ನು ಮಾರಿ 2 ಮನೆ ಖರೀದಿ ಮಾಡಿದ ವೃದ್ಧೆ! Selling Neighbors Secrets

ಸಂಪಾದನೆಗೆ ಹೊಸ ಐಡಿಯಾ... ಪಕ್ಕದ ಮನೆಯವರ ರಹಸ್ಯಗಳನ್ನು ಮಾರಿ 2 ಮನೆ ಖರೀದಿ ಮಾಡಿದ ವೃದ್ಧೆ! Selling Neighbors Secrets
ಸಂಪಾದನೆಗೆ ಹೊಸ ಐಡಿಯಾ... ಪಕ್ಕದ ಮನೆಯವರ ರಹಸ್ಯಗಳನ್ನು ಮಾರಿ 2 ಮನೆ ಖರೀದಿ ಮಾಡಿದ ವೃದ್ಧೆ! Selling Neighbors Secrets
Published on

ಪ್ರಮುಖ ಮುಖ್ಯಾಂಶಗಳು

  • ನೆರೆಹರೆಯವರ ರಹಸ್ಯಗಳ ಮಾರಾಟವೇ ಆದಾಯದ ಮೂಲವನ್ನಾಗಿಸಿಕೊಂಡ ಕೊಲಂಬಿಯಾದ ಅರುವತ್ತೇಳು ವರ್ಷದ ಮಹಿಳೆ ಮರಿಯಮ್
  • ಜನರ ವೈಯಕ್ತಿಕ ಗುಟ್ಟುಗಳನ್ನು ನೋಟ್ ಪುಸ್ತಕದಲ್ಲಿ ಬರೆದಿಟ್ಟುಕೊಂಡು ಹಣಕ್ಕಾಗಿ ಮಾರಾಟ ಮಾಡುವ ವಿಚಿತ್ರ ವೃತ್ತಿ
  • ಸಾಮಾನ್ಯ ಗಾಸಿಪ್ ಗೆ ಎರಡೂ ನೂರು ರೂಪಾಯಿ ಹಾಗೂ ದೊಡ್ಡ ಕುಟುಂಬದ ರಹಸ್ಯಗಳಿಗೆ ಹದಿನಾಲ್ಕು ಸಾವಿರಕ್ಕೂ ಹೆಚ್ಚು ಹಣ ಸಂಗ್ರಹ
  • ಗಾಸಿಪ್ ಮಾರಾಟದಿಂದ ಬಂದ ಹಣದಲ್ಲೇ ಎರಡು ದೊಡ್ಡ ಮನೆಗಳನ್ನು ಖರೀದಿಸಿ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಮಹಿಳೆ
ಬೊಗೊಟಾ: ಜನರೆಲ್ಲಾ ಹೊಸ ಹೊಸ ವ್ಯಾಪಾರ ಹಾಗೂ ಹಣ ಸಂಪಾದನೆಯ ಮಾರ್ಗಗಳನ್ನು ಹುಡುಕುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ಕೇವಲ ಬಾಯಿಂದ ಬಾಯಿಗೆ ಹಬ್ಬುವ ಗಾಸಿಪ್ ಅಥವಾ ವಯಕ್ತಿಕ ಗುಟ್ಟುಗಳನ್ನೇ ( Selling Neighbors Secrets ) ತನ್ನ ವೃತ್ತಿಯನ್ನಾಗಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಹೌದು, ಕೊಲಂಬಿಯಾದ ಅರ್ಮೇನಿಯಾ ನಗರದ 67 ವರ್ಷದ ಮರಿಯಮ್ ಎಂಬ ಮಹಿಳೆ ರಹಸ್ಯಗಳನ್ನು ಮಾರುವ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಾರೆ. ಕೇಳಲು ಇದು ತಮಾಷೆ ಎನಿಸಿದರೂ ಈ ಅಭ್ಯಾಸವನ್ನೇ ಗಂಭೀರ ಆದಾಯದ ಮೂಲವನ್ನಾಗಿ ಪರಿವರ್ತಿಸಿ ಯಶಸ್ಸನ್ನು ಸಹ ಈ ಮಹಿಳೆ ಕಂಡಿದ್ದಾರೆ.
ಮರಿಯಮ್ ಅವರ ಕೆಲಸವೆಂದರೆ ನೆರೆಹರೆಯವರ ರಹಸ್ಯಗಳು ಮತ್ತು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿ ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುವುದು ಹಾಗೂ ಅದನ್ನು ಇತರರಿಗೆ ಹಣಕ್ಕಾಗಿ ನೀಡುವುದು. ಕುಟುಂಬದ ಕಲಹಗಳು, ರಹಸ್ಯ ಪ್ರೇಮ ಪ್ರಸಂಗಗಳು, ಹಣಕಾಸಿನ ವ್ಯವಹಾರಗಳು ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳೆಲ್ಲವನ್ನೂ ದಿನಾಂಕ, ಸಮಯ ಹಾಗೂ ಜನರ ಹೆಸರುಗಳ ಸಮೇತ ಅವರು ತಮ್ಮ ನೋಟ್‌ಬುಕ್‌ಗಳಲ್ಲಿ ಅಚ್ಚುಕಟ್ಟಾಗಿ ದಾಖಲಿಸಿಟ್ಟುಕೊಳ್ಳುತ್ತಾರೆ.
ಸಾಮಾನ್ಯ ಗಾಸಿಪ್‌ಗಳನ್ನು ತಿಳಿಸಲು ಅವರು 5,000 ದಿಂದ 10,000 ಕೊಲಂಬಿಯನ್ ಪೆಸೊಗಳವರೆಗೆ (ಸುಮಾರು 150 ರಿಂದ 200 ರೂಪಾಯಿ) ಶುಲ್ಕ ವಿಧಿಸಿದರೆ, ದೊಡ್ಡ ಕುಟುಂಬದ ರಹಸ್ಯಗಳಿಗೆ ಸುಮಾರು 7,00,000 ಪೆಸೊಗಳವರೆಗೆ (ಸುಮಾರು 14,700 ರೂಪಾಯಿ) ಅಥವಾ ಅದಕ್ಕಿಂತ ಹೆಚ್ಚಿನ ದರವನ್ನು ಪಡೆಯುತ್ತಾರೆ. ವಿಶೇಷವೆಂದರೆ, ತಮ್ಮ ಗುಟ್ಟುಗಳು ಹೊರಬಾರದಂತೆ ತಡೆಯಲು ಕೆಲವರು ಹಣ ನೀಡಿ ರಹಸ್ಯಗಳನ್ನು ಮುಚ್ಚಿಡುವಂತೆ ಮಾಡುತ್ತಾರೆ ಎಂದು ಮರಿಯಮ್ ಬಹಿರಂಗಪಡಿಸಿದ್ದಾರೆ.
ಈ ವ್ಯವಹಾರದಲ್ಲಿ ಮಾಹಿತಿಯನ್ನು ಎರಡು ರೀತಿಯಲ್ಲಿ ಹಣಗಳಿಸಲು ಬಳಸಿಕೊಳ್ಳುವುದಾಗಿ ತಿಳಿಸುವ ಅವರು, ಕೆಲ ಸಂದರ್ಭಗಳಲ್ಲಿ ಸಾಕ್ಷಿಗಾಗಿ ಸಂಬಂಧಪಟ್ಟವರ ಫೋಟೋಗಳನ್ನು ಸಹ ತಮ್ಮ ಬಳಿ ಭದ್ರವಾಗಿಟ್ಟುಕೊಳ್ಳುತ್ತಾರೆ. ಈ ವಿಚಿತ್ರ ಹಾಗೂ ಕುತೂಹಲಕಾರಿ 'ವೃತ್ತಿ'ಯ ಬಗ್ಗೆ ಇನ್ಫೋಬೆ (Infobay) ಮಾಧ್ಯಮದಲ್ಲಿ ಸಂದರ್ಶನ ಪ್ರಕಟವಾದ ನಂತರವೇ ಇಡೀ ಜಗತ್ತಿಗೆ ಈ ಮಹಿಳೆಯ ಹೈಟೆಕ್ ಗಾಸಿಪ್ ಕಥೆ ತಿಳಿದುಬಂದಿದೆ.
ಯಾವಾಗಲೂ ಕುತೂಹಲದಿಂದ ಇತರರ ವೈಯಕ್ತಿಕ ವಿಷಯಗಳನ್ನು ತಿಳಿದುಕೊಳ್ಳಲು ಬಯಸುವ ಸಮಾಜದ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡಿರುವ ಮರಿಯಮ್, ಗಾಸಿಪ್ ಮಾರಾಟದಿಂದ ಬಂದ ಹಣದಲ್ಲೇ ಬೀರೇ ಎರಡು ದೊಡ್ಡ ಮನೆಗಳನ್ನು ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ವೃತ್ತಿಪರ ಗಾಸಿಪ್‌ಗಾರ್ತಿಯಾಗಿ ಅವರು ನಡೆದುಕೊಂಡಿರುವ ಈ ವಿಭಿನ್ನ ದಾರಿ ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net