ಆದಾಗ್ಯೂ, ತಯಾಬ್ ಅವರಿಗೆ ಈ ಹಿಂದೆ ಲಾಟರಿಯಲ್ಲಿ ಸಣ್ಣಪುಟ್ಟ ಬಹುಮಾನಗಳು ಬಂದಿದ್ದವು. ಹಾಗಾಗಿ, ಈ ಬಾರಿಯೂ ಇಮೇಲ್ ಬಂದಾಗ ಅವರು, ಯಾವುದೋ ಸಣ್ಣ ಮೊತ್ತ ಇರಬಹುದು ಎಂದು ಸಾಧಾರಣವಾಗಿ ಭಾವಿಸಿದ್ದರು. ಅದಕ್ಕಾಗಿ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ನಂತರ ಲಿಂಕ್ ಓಪನ್ ಮಾಡಿ ನೋಡಿದಾಗ ಬರೋಬ್ಬರಿ 78 ಕೋಟಿ ಜಾಕ್‌ಪಾಟ್ ಹೊಡೆದಿದ್ದು, ದಿಗ್ಭ್ರಮೆಗೊಂಡಿರುವುದಾಗಿ ತಿಳಿಸಿದರು.