ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್ ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದಿದ್ದರೂ, ಚೀನಾ ಇರಾನ್ ಬೆನ್ನಿಗೆ ನಿಂತರೆ ಅದರ ಆರ್ಥಿಕ ಮತ್ತು ರಾಜತಾಂತ್ರಿಕ ಪರಿಣಾಮ ಭೀಕರವಾಗಿರುತ್ತದೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಚೀನಾ ಹಾಗೆ ಮಾಡಿದರೆ, ಅವರಿಗೆ ದೊಡ್ಡ ತೊಂದರೆಯಾಗಲಿದೆ, ಓಕೆ? ಎಂಬ ಅವರ ಮಾತು ಈಗ ಬೀಜಿಂಗ್‌ನಲ್ಲಿ ನಡುಕ ಹುಟ್ಟಿಸಿದೆ.