ನಜೀರುದ್ದೀನ್ ಅವರ ಕುಟುಂಬ ಮೆಕ್ಕಾಗೆ ತೆರಳಿತ್ತು. ಅವರು ಮುಂದಿನ ವಾರ ಹೈದರಾಬಾದ್‌ಗೆ ಬರಬೇಕಿತ್ತು. ಈ ಮಧ್ಯೆ ಎಲ್ಲರೂ ಸಾವನ್ನಪ್ಪಿರುವುದು ನಮಗೆ ಅತೀವ ನೋವುಂಟು ತಂದಿದೆ. ಬಸ್ ಅಪಘಾತದಲ್ಲಿ ನಾವು 18 ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದೇವೆ. ನಜೀರುದ್ದೀನ್ ನಿವೃತ್ತ ರೈಲ್ವೆ ಉದ್ಯೋಗಿ ಆಗಿದ್ದರು. ಅವರ ಮಗ ಇತ್ತೀಚೆಗಷ್ಟೇ ಅಮೆರಿಕದಿಂದ ಮರಳಿದ್ದರು. ನಜೀರುದ್ದೀನ್ ಅವರ ಪತ್ನಿ, ಇಬ್ಬರು ಪುತ್ರರು, ಸೊಸೆ ಮತ್ತು ಆರು ಮಕ್ಕಳು, ಒಟ್ಟು 18 ಜನರು ಸಾವಿಗೀಡಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ,(ಏಜೆನ್ಸೀಸ್).