ಮರಣದಂಡನೆ ಶಿಕ್ಷೆಯಲ್ಲಿ ದಾಖಲೆ ಬರೆದ ಸೌದಿ ಅರೇಬಿಯಾ! 2025ರಲ್ಲಿ ಗಲ್ಲಿಗೇರಿಸಿದ ಸಂಖ್ಯೆ ಕೇಳಿದ್ರೆ ದಂಗಾಗ್ತೀರಾ | Saudi Arabia

ಸೌದಿ ಅರೇಬಿಯಾ
ಸೌದಿ ಅರೇಬಿಯಾ
Published on

ಪ್ರಮುಖ ಮುಖ್ಯಾಂಶಗಳು

  • ಒಂದೇ ವರ್ಷದಲ್ಲಿ ಅತಿ ಹೆಚ್ಚು ಮರಣದಂಡನೆ ಶಿಕ್ಷೆ ವಿಧಿಸಿದ ಸೌದಿ ಅರೇಬಿಯಾ
  • ಗಲ್ಲು ಶಿಕ್ಷೆಯಲ್ಲಿ ದಾಖಲೆ ನಿರ್ಮಿಸಿದ ಸೌದಿ
  • 2025ರಲ್ಲಿ 356 ಅಪರಾಧಿಗಳನ್ನು ಗಲ್ಲಿಗೇರಿಸಿದೆ
  • ಈ ಪೈಕಿ ಮಾದಕವಸ್ತು ಪ್ರಕರಣಗಳಲ್ಲಿ ಸಿಕ್ಕಿಬಿದ್ದವರೇ ಅಧಿಕ
ಸೌದಿ ಅರೇಬಿಯಾ: ನಮ್ಮ ದೇಶಗಳಲ್ಲಿ ಇದು ಅತ್ಯಂತ ಕಠಿಣ ಶಿಕ್ಷೆ ಎಂದು ಹೇಳಿದರೆ, ಸೌದಿ ಅರೇಬಿಯಾದಂತಹ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಗಲ್ಲು ಶಿಕ್ಷೆ ತೀರ ಸಾಮಾನ್ಯವಾಗಿದೆ. ಕಳೆದ ಒಂದೇ ವರ್ಷದಲ್ಲಿ ಮರಣದಂಡನೆ ಶಿಕ್ಷೆ ವಿಧಿಸುವ ಪ್ರಕ್ರಿಯೆಯಲ್ಲಿ ಸೌದಿ ಹೊಸ ದಾಖಲೆಯನ್ನೇ ನಿರ್ಮಿಸಿರುವುದು ಸದ್ಯ ಹಲವರ ಹುಬ್ಬೇರಿಸಿದೆ.
2026ಕ್ಕೆ ಕಾಲಿಟ್ಟ ಮೊದಲ ದಿನವೇ ಈ ಸುದ್ದಿ ಹೊರಬಿದ್ದಿದ್ದು, ಅಲ್ಲಿನ ಅಂಕಿಅಂಶಗಳ ಪ್ರಕಾರ, 2025ರಲ್ಲಿ ಸೌದಿ ಅರೇಬಿಯಾ ಬರೋಬ್ಬರಿ 356 ಜನರನ್ನು ಮರಣದಂಡನೆ ಶಿಕ್ಷೆಗೆ ಗುರಿಪಡಿಸಿದೆ. ಈ ಮೂಲಕ ಒಂದೇ ವರ್ಷದಲ್ಲಿ ಗಲ್ಲಿಗೇರಿಸಿದ ಕೈದಿಗಳ ಸಂಖ್ಯೆಯಲ್ಲಿ ದಾಖಲೆ ನಿರ್ಮಿಸಿದೆ.
ಮರಣದಂಡನೆ ಹೆಚ್ಚಳಕ್ಕೆ ಪ್ರಮುಖ ಕಾರಣ ಮಾದಕವಸ್ತುಗಳ ವಿರುದ್ಧದ ಹೋರಾಟ ಎಂದು ಸ್ಥಳೀಯ ತಜ್ಞರು ಹೇಳುತ್ತಾರೆ. ಅಪರಾಧಿಗಳ ಪೈಕಿ ಅನೇಕರು ಡ್ರಗ್ಸ್​ ಕೇಸ್​ಗಳಲ್ಲಿಯೇ ಬಂಧನಕ್ಕೆ ಒಳಗಾಗಿ, ಗಲ್ಲುಶಿಕ್ಷೆಗೆ ಗುರಿಯಾಗಿದ್ದಾರೆ ಎಂದು 'ಎನ್​ಡಿಟಿವಿ' ವರದಿ ಮಾಡಿದೆ. 
ಸೌದಿ ಸರ್ಕಾರ ಬಿಡುಗಡೆಗೊಳಿಸಿರುವ ಅಧಿಕೃತ ಮಾಹಿತಿಯ ಪ್ರಕಾರ, 2025ರಲ್ಲಿ ಕೇವಲ ಡ್ರಗ್ಸ್​ ಸಂಬಂಧಿತ ಪ್ರಕರಣಗಳಲ್ಲಿ 243 ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ. ಇದೇ 2024ರಲ್ಲಿ 338 ಮಂದಿಗೆ ಮರಣದಂಡನೆ ವಿಧಿಸಿತು. ಸುಮಾರು ಮೂರು ವರ್ಷಗಳ ಕಾಲ ಮಾದಕವಸ್ತು ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಯನ್ನು ಸ್ಥಗಿತಗೊಳಿಸಿದ್ದ ಸೌದಿ ಅರೇಬಿಯಾ, 2022ರಲ್ಲಿ ಪುನಃ ಇದನ್ನು ಮುಂದುವರಿಸಿತು ಎಂಬುದು ಗಮನಾರ್ಹ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net