ಫಾರ್ಮನ್ ಕ್ರಿಶ್ಚಿಯನ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಶಾಹಿದ್ ರಶೀದ್ , ಶಾಸ್ತ್ರೀಯ ಭಾಷೆಗಳು ಮಾನವಕುಲಕ್ಕೆ ಹೆಚ್ಚಿನ ಬುದ್ಧಿವಂತಿಕೆಯನ್ನು ನೀಡುತ್ತದೆ. ನಾನು ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯನ್ನು ಕಲಿಯುವುದರೊಂದಿಗೆ ಜತೆ ಸಂಸ್ಕೃತವನ್ನು ಅಧ್ಯಯನ ಮಾಡಿದೆ" ಎಂದು ಅವರು ಹೇಳಿದರು. ಸಂಸ್ಕೃತ ವ್ಯಾಕರಣಜ್ಞ ಪಾಣಿನಿಯ ಗ್ರಾಮವು ಈ ಪ್ರದೇಶದಲ್ಲಿತ್ತು. ಸಿಂಧೂ ಕಣಿವೆ ನಾಗರಿಕತೆಯ ಸಮಯದಲ್ಲಿ ಇಲ್ಲಿ ಹೆಚ್ಚಿನ ಬರವಣಿಗೆಯನ್ನು ಮಾಡಲಾಯಿತು. ಸಂಸ್ಕೃತವು ಒಂದು ಪರ್ವತದಂತೆ ನಾವು ಅದನ್ನು ಏರಲು ಪ್ರಯತ್ನಿಸಬೇಕು. ಸಂಸ್ಕೃತ ಭಾಷೆ ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿಲ್ಲ, ಅದು ವಿಶ್ವ ಭಾಷೆ ಎಂದರು. ಭಾರತದಲ್ಲಿ ಹೆಚ್ಚಿನ ಹಿಂದೂಗಳು ಮತ್ತು ಸಿಖ್ಖರು ಅರೇಬಿಕ್ ಕಲಿಯಲು ಪ್ರಾರಂಭಿಸಿದರೆ ಮತ್ತು ಪಾಕಿಸ್ತಾನದಲ್ಲಿ ಹೆಚ್ಚಿನ ಮುಸ್ಲಿಮರು ಸಂಸ್ಕೃತವನ್ನು ಅಳವಡಿಸಿಕೊಂಡರೆ, ಭಾಷೆಗಳು ಅಡೆತಡೆಗಳ ಬದಲು ಸೇತುವೆಗಳಾಗುತ್ತವೆ ಎಂದು ಹೇಳಿದರು.(ಏಜೆನ್ಸೀಸ್).