ಇದನ್ನು ಥರ್ಡ್ ಅಂಪೈರ್ ಪರಿಶೀಲಿಸಿದಾಗ ಅಘಾ ಕ್ರೀಸ್‌ನಿಂದ ಹೊರಗಿರುವುದು ಸ್ಪಷ್ಟವಾಯಿತು. ನಿಯಮದ ಪ್ರಕಾರ ಚೆಂಡು ಡೆಡ್ ಆಗಿರದ ಕಾರಣ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಇದರಿಂದ ಆಘಾತಕ್ಕೊಳಗಾದ ಸಲ್ಮಾನ್ ಅಘಾ, ಮಿರಾಜ್ರ ಕ್ರೀಡಾ ಮನೋಭಾವದ ವಿರುದ್ಧದ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಡ್ರೆಸ್ಸಿಂಗ್ ರೂಮ್‌ಗೆ ಮರಳುವಾಗ ಸಿಟ್ಟಿನಿಂದ ಹೆಲ್ಮೆಟ್ ಎಸೆದು ತಮ್ಮ ಆಕ್ರೋಶ ಹೊರಹಾಕಿದರು.