ಟೆಲಿಗ್ರಾಮ್ ಮತ್ತು ವಾಟ್ಸ್ಆ್ಯಪ್ ಪ್ರಸ್ತುತ ರಷ್ಯಾದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಆದಾಗ್ಯೂ, ರಷ್ಯಾದ ಸರ್ಕಾರವು ಕಳೆದ ಕೆಲವು ದಿನಗಳಿಂದ ಜನರ ಡೇಟಾಗೆ ಪ್ರವೇಶಿಸಲು ತೀರ ಒತ್ತಾಯಿಸುತ್ತಿದೆ. ಇದಕ್ಕೆ ಮೆಟಾ ಒಪ್ಪದ ಹಿನ್ನೆಲೆ ಆಗಸ್ಟ್ನಿಂದ ರಷ್ಯಾ ವಾಟ್ಸ್ಆ್ಯಪ್ ಕಾಲ್ಗಳನ್ನು ನಿಷೇಧಿಸಿದೆ. ಆದಾಗ್ಯೂ, ಮೆಟಾ ಜನರ ಡೇಟಾವನ್ನು ಹಂಚಿಕೊಳ್ಳಲು ಕಿಂಚಿತ್ತು ಒಪ್ಪದ ಕಾರಣ, ರಷ್ಯಾ ವಾಟ್ಸಾಪ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ತೆರೆಮೆರೆಯಲ್ಲಿ ಕೆಲಸ ಮಾಡುತ್ತಿದೆ ಎಂದು ರೂಟರ್ಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ,(ಏಜೆನ್ಸೀಸ್).